ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಆರೋಪಿ ಮಾಜಿ ಸಚಿವ ನಾಗೇಂದ್ರ ಬಂಧನವಾಗುತ್ತಿದ್ದಂತೆ ಶಾಸಕ ಬಸನಗೌಡ ದದ್ದಲ್ ಬಂಧನ ಭೀತಿಯಿಂದ ತತ್ತರಿಸಿದ್ದಾರೆ. ಶುಕ್ರವಾರ ಸಂಜೆವರೆಗೂ ಎಸ್‌ಐಟಿ ವಿಚಾರಣೆ ಎದುರಿಸಿದ್ದ ದದ್ದಲ್ ರಾತ್ರೋರಾತ್ರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಎಸ್‌ಐಟಿ ತನಿಖೆಗೆ ಹಾಜರಾಗಿದ್ದ ವೇಳೆ ಅಧಿಕಾರಿಗಳಲ್ಲಿ ನನ್ನನ್ನು ಬಂಧಿಸಿ, ಇಡಿ ಕೈಗೆ ಸಿಕ್ಕರೆ ನಾನು ಹಾಗೂ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕುತ್ತೇವೆ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದರಂತೆ. ಇದಕ್ಕೆ ಒಪ್ಪದ ಎಸ್‌ಐಟಿ ಅಧಿಕಾರಿಗಳು, ಅಕಸ್ಮಾತ್ ನಾವು ಬಂಧಿಸಿದರೂ ಇಡಿ ತಂಡ ನಿಮ್ಮನ್ನು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆಯಬಹುದು ಎಂದು ಎಚ್ಚರಿಕೆ ನೀಡಿ ಕಳುಹಿಸಿದೆ ಅತ್ತ ಎಸ್‌ಐಟಿ ಬಂಧನ ಮಾಡುವುದಿಲ್ಲ ಎಂದರಿತ ದದ್ದಲ್ ಕೂಡಲೇ ಅಜ್ಞಾತ ಸ್ಥಳಕ್ಕೆ ಪರಾರಿ ನಿರ್ಧಾರ ಕೈಗೊಂಡಿದ್ದಾರೆ.