ಕೋಟ : ದಾನಗಳಲ್ಲಿ ಹಲವು ದಾನಗಳಿರಬಹುದು ಆದರೆ ಅತಿ ಅವಶ್ಯವಾಗಿರುವ ರಕ್ತದಾನ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದು ಸಮಾಜ ಸೇವಕ ಆನಂದ್ ಸಿ ಕುಂದರ್ ಹೇಳಿದರು. ಭಾನುವಾರ ಕೋಟ ಗ್ರಾಮ ಪಂಚಾಯತ್ ಸಭಾಭವನ, ಕೋಟ ಇಲ್ಲಿ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೋಟ ಘಟಕ ಹಾಗೂ ಮಹಿಳಾ ಸಂಘಟನೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ,ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಕೋಟ, ಗ್ರಾಮ ಪಂಚಾಯತ್ ಕೋಟ ರಕ್ತನಿಧಿ ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ನೇತೃತ್ವದಲ್ಲಿ ಜಿಲ್ಲಾಡಳಿತ ಉಡುಪಿ ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರಕ್ತದ ಮಹತ್ವ ಅರಿತು ರಕ್ತದಾನ ಮಾಡಿ ಎಂದರಲ್ಲದೆ ರಕ್ತದ ಅವಶ್ಯಕತೆ ಪ್ರತಿ ಸಂದರ್ಭದಲ್ಲೂ ಎದುರಾಗುತ್ತದೆ, ಒಂದು ಯುನಿಟ್ ರಕ್ತ ಎಂಬುವುದು ನಾಲ್ಕು ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ,ನಾಡೋಜ ಡಾ.ಜಿ ಶಂಕರ್ ಕನಸಿನ ಕೂಸಾದ ರಕ್ತದಾನ ಇಡೀ ದೇಶದಲ್ಲಿ ಹೊಸ ಭಾಷ್ಯ ಬರೆದಿದೆ.ಇಂತಹ ಕಾರ್ಯಕ್ರಮಗಳು ಮನೆಮನಗಳನ್ನು ತಲುಪಿ ಆಸ್ಪತ್ರೆಗಳಲ್ಲಿ ರಕ್ತದ ದಾಹ ನಿಗಿಸುವಂತ್ತಾಗಲಿ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಮೊಗವೀರ ಯುವ ಸಂಘ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಮ್ ಕೆ.ಎಂ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ರಕ್ತದ ಅವಶ್ಯಕತೆ ಇದೆ ಆಸ್ಪತ್ರೆಗಳಲ್ಲಿ ಡಂಗ್ಯು ಪ್ರಕರಣಗಳು ಅತಿಯಾಗಿ ಕಾಣುತ್ತಿದ್ದೇವೆ ಇದಕ್ಕಾಗಿ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದಲ್ಲದೆ ನೀರು ನಿಲ್ಲದಂತೆ ಜಾಗೃತಿ ವಹಿಸಿ ,ಡಂಗ್ಯೂ ಪೀಡಿತರಿಗೆ ರಕ್ತದ ಅವಶ್ಯಕತೆ ಇರುವುದರಿಂದ ರಕ್ತದಾನ ಮಾಡಿ ಹಾಗೇ ಸ್ಥಳೀಯಾಡಳಿತಗಳು ಡಂಗ್ಯೂ ಬಗ್ಗೆ ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಇದಕ್ಕೆ ಮೊಗವೀರ ಯುವ ಸಂಘಟನೆ ಪೂರ್ಣ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆ ಕೋಟ ಘಟಕದ ಅಧ್ಯಕ್ಷ ರಂಜೀತ್ ಕುಮಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ,ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಜೇಂದ್ರ ಹಿರಿಯಡ್ಕ,ಮಾಜಿ ಕಾರ್ಯದರ್ಶಿ ರವೀಶ್ ಶ್ರೀಯಾನ್ ಕೊರವಡಿ,ಪ್ರಸ್ತುತ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬೆಳ್ಳಂಪಳ್ಳಿ,ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಭಾಸ್ಕರ್,ಕೆ.ಎಂ.ಸಿ ರಕ್ತನಿಧಿಯ ಕಾವ್ಯ,ವಿಶ್ವೇಶ್ಚರ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ,ಮೊಗವೀರ ಯುವ ಸಂಘ ಕೋಟ ಘಟಕದ ಉಸ್ತುವಾರಿ ಅಶೋಕ್ ತೆಕ್ಕಟ್ಟೆ, ಮಾಜಿ ಜಿಲ್ಲಾಧ್ಯಕ್ಷ ಸಂಜೀವ ಎಂ.ಎಸ್,ಮಾಜಿ ಅಧ್ಯಕ್ಷರಾದ ರಮೇಶ್ ವಿ ಕುಂದರ್,ಗಿರೀಶ್ ಬಂಗೇರ,ದೇವದಾಸ್ ಕಾಂಚನ್,ಜಿಲ್ಲಾ ಸಂಘಟನೆಯ ಕೃಷ್ಣಮೂರ್ತಿ ಮರಕಾಲ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸಂಘಟನೆ ರವಿಕಿರಣ್ ಕೋಟ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಮಾಜಿ ಅಧ್ಯಕ್ಷ ಸುರೇಶ್ ಮರಕಾಲ ಸಹರಿಸಿದರು.