Home » ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯಿಂದ ಮನವಿ
 

ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯಿಂದ ಮನವಿ

by Kundapur Xpress
Spread the love

ಕುಂದಾಪುರ: ಕೊಂಕಣ ರೈಲ್ವೆಯ ಮತ್ತು ಕುಂದಾಪುರ ರೈಲು ಸೇವೆಗೆ ಸಂಬಂಧಿತ ವಿಷಯಗಳ ಕುರಿತು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿಯವರಿಗೆ ಶಾಸಕರ ಕಛೇರಿಯಲ್ಲಿ ಮನವಿ ನೀಡಲಾಯಿತು.

ಇದೇ ಸಂಧರ್ಭ ನಡೆದ ಸಭೆಯಲ್ಲಿ ಕೊಂಕಣ ರೈಲ್ವೆ ಪಾಲುದಾರ ರಾಜ್ಯವಾದ ಕರ್ನಾಟಕ ತನ್ನ ಪಾಲಿನ 270 ಕೋಟಿ ಮೌಲ್ಯದ ಶೇರನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ಕೊಂಕಣ ನಿಗಮವನ್ನು ಬಾರತೀಯ ರೈಲ್ವೇ ಜತೆ ವಿಲೀನ ಮಾಡಬೇಕು. ಅಥವಾ ತನ್ನ ಪಾಲುದಾರಿಕಾ ಉದ್ಯಮವಾದ ಕೊಂಕಣ ನಿಗಮದ ಶೇರನ್ನು ಇಟ್ಟುಕೊಳ್ಳುವುದಾದರೆ, ತಕ್ಷಣವೇ ರಾಜ್ಯದ ಹಳಿ ಡಬ್ಲಿಂಗ್ ಮಾಡಲು ಬೇಕಾದ ಸುಮಾರು 2000 ಕೋಟಿ ಹಣವನ್ನು ಕೊಂಕಣ ನಿಗಮಕ್ಕೆ ನೀಡಿ ಕರಾವಳಿಯ ಜನರ ರೈಲು ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಕುಂದಾಪುರ ಬೆಂಗಳೂರು ಮದ್ಯೆ ಹೊಸ ಪಡೀಲ್ ಬೈಪಾಸ್ ರೈಲಿಗೆ ಬೇಡಿಕೆ ಸಲ್ಲಿಸಲಾಯಿತು. ಕುಂದಾಪುರ ರೈಲು ನಿಲ್ದಾಣದ ಮೇಲ್ದರ್ಜೆ ಸಂಬಂಧಿಸಿ ಆಗಬೇಕಾದ ಕೆಲಸಗಳನ್ನು ಶಾಸಕರ ನೇತೃತ್ವದಲ್ಲಿ ಕೈಗೊಳ್ಳುವ ಕುರಿತು ಹಾಗೂ ಸಂಸದರ ಜತೆ ಸಭೆ ನಡೆಸುವ ಕುರಿತು ಮನವಿ ಮಾಡಿದರು.
ಇದೇ ವೇಳೆ ಶಾಸಕರು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.

   

Related Articles

error: Content is protected !!