Home » ಗದ್ದೆಯಲ್ಲಿ ಮಿಂದೆದ್ದ ಗುರುಕುಲ ವಿದ್ಯಾರ್ಥಿಗಳು
 

ಗದ್ದೆಯಲ್ಲಿ ಮಿಂದೆದ್ದ ಗುರುಕುಲ ವಿದ್ಯಾರ್ಥಿಗಳು

ನಾಟಿ ಪ್ರಾತ್ಯಕ್ಷಿಕೆ

by Kundapur Xpress
Spread the love

ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಭತ್ತದ ಕೃಷಿ ಮರೆಯಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಬಗ್ಗೆ ಅರಿವು ಮೂಡಿಸಿ ಪ್ರಾಯೋಗಿಕವಾದ ಮಾಹಿತಿ ನೀಡುವ ನಿಟ್ಟಿನಲ್ಲಿ ಬಾಂಡ್ಯ ಎಜುಕೇಶನಲ್‌ ಟ್ರಸ್ಟನ ಗುರುಕುಲ ಪಬ್ಲಿಕ್‌ ಸ್ಕೂಲಿನ ಎಸ ಎಸ ಎಲ್‌ ಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೃಷಿ ನಾಟಿಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಭತ್ತದ ಕೃಷಿ ಪದ್ದತಿಯನ್ನು ಪರಿಚಯಿಸಲಾಯಿತು

ಬಾಂಡ್ಯ ಎಜುಕೇಶನಲ್‌ ಟ್ರಸ್ಟಿನ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ್‌ ಎಸ್‌ ಶೆಟ್ಟಿಯವರು ತಮ್ಮ 4.00 ಎಕ್ರೆ ಗದ್ದೆಯಲ್ಲಿ ಕೃಷಿ ನಾಟಿ ಕಾರ್ಯಕ್ರಮದಲ್ಲಿ ನೇಜಿಯನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಿಕ್ಷಕ ಶಿಕ್ಷಕಿಯರೊಂದಿಗೆ ಹುಮ್ಮಸ್ಸಿನಿಂದ ಭತ್ತ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು

ಗದ್ದೆಯಲ್ಲಿ ವಿದ್ಯಾರ್ಥಿಗಳು ಊರ ಕೃಷಿಕರು ಹಾಗೂ ಹಲವು ಸಾಂಪ್ರದಾಯಿಕ ನಾಟಿ ಮಾಡುವ ಮಹಿಳೆಯರೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ನೇಜಿ ನೆಟ್ಟು ನಾಟಿ ಪದ್ದತಿಯ ನೈಜ ಅನುಭವವನ್ನುವಿದ್ಯಾರ್ಥಿಗಳು ಪಡೆದುಕೊಂಡು ಸಂಭ್ರಮಿಸಿದರು

ಈ ಸಂದರ್ಭದಲ್ಲಿ ಗುರುಕುಲ ಪಬ್ಲಿಕ್‌ ಸ್ಕೂಲಿನ ಪ್ರಾಂಶುಪಾಲರಾದ ಸುನಿಲ್ ಹಾಗೂ ಶಿಕ್ಷಕ ಶಿಕ್ಷಕಿಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

   

Related Articles

error: Content is protected !!