ಬೆಂಗಳೂರು : ಆಸ್ತಿ ತೆರಿಗೆ ವಿನಾಯಿತಿ ಪಡೆದಿರುವ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧ ಕಟ್ಟಡದ ಕನಿಷ್ಠ ಮೊತ್ತದ ಸೇವಾ ಶುಲ್ಕವನ್ನೂ ಪಾವತಿಸದೇ 17 ವರ್ಷ ದಿಂದ ರಾಜ್ಯ ಸರ್ಕಾರವು ಬಾಕಿ ಉಳಿಸಿಕೊಂಡಿದ್ದು, ‘ಒನ್ ಟೈಮ್ ಸೆಟಲೈಂಟ್’ (ಓಟಿಎಸ್) ಯೋಜನೆಯಡಿಯಾದರೂ ಶುಲ್ಕ ಪಾವತಿಸಲು ಬಿಬಿಎಂಪಿಯು ಸರ್ಕಾರಕ್ಕೆ ದುಂಬಾಲು ಬೀಳಲು ಸಜ್ಜಾಗಿದೆ.
ವಿಧಾನಸೌಧ ಕಟ್ಟಡದ 5.35 ಕೋಟಿ ರು. ಹಾಗೂ ವಿಕಾಸಸೌಧ ಕಟ್ಟಡದ 2.14 ಕೋಟಿ ರು. ಸೇರಿದಂತೆ 7 ಕೋಟಿ ರು.ಗೂ ಅಧಿಕ ಮೊತ್ತದ ಸೇವಾ ಶುಲ್ಕ ಬಾಕಿ ಇದೆ. ಬಿಬಿಎಂಪಿ ರಚನೆಯಾದ 2008ರಿಂದ ಎರಡೂ ಕಟ್ಟಡಗಳಿಗೆ ಆಸ್ತಿ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ