ಕಿನ್ನಿಗೋಳಿ : ಗ್ರಾಹಕರ ಸೋಗಿನಲ್ಲಿ ಬಂದು ವ್ಯಾಪಾರಿಗಳನ್ನು ವಂಚಿಸುತ್ತಿದ್ದ ತಂಡವನ್ನು ಮೂಲ್ಕಿ ಪೋಲಿಸರು ಬಂಧಿಸಿದ್ದಾರೆ. ಸ್ಥಾರ್ಪಿಯೋ ಕಾರಿನಲ್ಲಿ ಬಂದ ಮೂವರು ಕಿನ್ನಿಗೋಳಿ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಸಾಮಾನುಗಳನ್ನು ತೆಗೆದುಕೊಂಡು, ಗೂಗಲ್ ಪೇ ಮಾಡುತ್ತೇವೆ ಎಂದು ಹೇಳಿದ್ದು, 500 ರೂಪಾಯಿ ಕೊಡಿ ಸಾಮಾನಿನ ಹಣ ಮತ್ತು 500 ರೂಪಾಯಿ ಒಟ್ಟಿಗೆ ಗೂಗಲ್ ಪೇ ಮಾಡುತ್ತೇನೆಂದು ಹೇಳಿದ್ದಾರೆ. ಈ ಸಂದರ್ಭ ಪಕ್ಕದ ಅಂಗಡಿಯವರು ಸಂಶಯದಿಂದ ವಿಚಾರಿಸಿದಾಗ, ಇದು ವಂಚಕರ ತಂಡ ಎಂಬುದು ಗಮನಕ್ಕೆ ಬಂದಿದೆ.
ಈ ಸಂದರ್ಭ ಮೂವರು ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಾರ್ವಜನಿಕರು ಬೆನ್ನಟ್ಟಿ ಇಬ್ಬರನ್ನು ಹಿಡಿದು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಓರ್ವ ಪರಾರಿಯಾಗಿದ್ದು ಇಬ್ಬರನ್ನು ಮೂಲ್ಕಿ ಪೋಲಿಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ