ಉಡುಪಿ : ಗುರುವಾರ ಸುರಿದ ಭಾರೀ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಇಲ್ಲಿನ ಕಡೆಕಾರು ಪಂಚಾಯತ್ ವ್ಯಾಪ್ತಿಯಲ್ಲಿ ಸಂಭವಿಸಿದ್ದು ಮನೆಯಲ್ಲಿದ್ದವರು ಹೊರಕ್ಕೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.”
ಶಾರದ ಪೂಜಾರಿ ಎಂಬವರಿಗೆ ಸೇರಿದ ಮನೆಯಲ್ಲಿ 10 ಮಂದಿ ವಾಸವಿದ್ದರು. ಮನೆ ಸಂಪೂರ್ಣ ಕುಸಿದು ಬೀಳುವ ಕೇವಲ ಹತ್ತು ನಿಮಿಷಗಳ ಮೊದಲು ಕುಟುಂಬವು ಆವರಣದಿಂದ ಹೊರ ಹೋಗುವಲ್ಲಿ ಯಶಸ್ವಿಯಾಗಿದೆ. 30 ವರ್ಷಗಳಷ್ಟು ಹಳೆಯ ಮನೆ ಇದಾಗಿತ್ತು.
ಮನೆ ಕುಸಿದು ಬೀಳುವ ಮುನ್ನವೇ ನಾಲ್ವರು ಮಕ್ಕಳು ಮನೆಯ ಕೊಠಡಿಯೊಳಗಿದ್ದು, ಕುಸಿಯುವ ಲಕ್ಷಣ ಗೋಚರಿಸಿದ ಕೂಡಲೆ ಎಲ್ಲರೂ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಆಟಿಕೆಗಳು, ಬಟ್ಟೆಗಳು ಮತ್ತು ಇತರೆ ದಾಖಲೆಗಳು ಮಣ್ಣಿನ ಅಡಿಯಲ್ಲಿ ಹೂತು ಹೋಗಿವೆ. ಮನೆಯಲ್ಲಿ ವಾಸವಿದ್ದ ಕುಟುಂಬ ಇದೀಗ ಉಡುಪಿಯ ಕಡೆಕಾರ್ನಲ್ಲಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದೆ.