ಕೋಟ : ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ 2023 – 24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು.
ಕೋಟ ವಿದ್ಯಾ ಸಂಘ ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ಮಾಹೆ ಎಂ.ಸಿ.ಚ್.ಪಿ ಫಿಜಿಯೋಥೆರಪಿ ವಿಭಾಗದ ಪೆÇ್ರಫೆಸರ್ ಡಾ. ಜಿ. ಅರುಣ್ ಮಯ್ಯ, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ , ಕೋಟ ವಿವೇಕ ವಿದ್ಯಾಸಂಸ್ಥೆ ಕೋಟದ ಗ್ರಾಮೀಣ ಪರಿಸರದಲ್ಲಿ ಇದ್ದರೂ ಇದು ಕೇವಲ ನಮ್ಮ ಜಿಲ್ಲೆಯಲ್ಲಿ ಮಾತ್ರ ವಲ್ಲ ಇಡೀ ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ವಿದ್ಯಾಸಂಸ್ಥೆಯಾಗಿದೆ. ಇಲ್ಲಿ ಪಾಠದೊಂದಿಗೆ ಪಾಠೇತರ ಚಟುವಟಿಕೆಗಳಲ್ಲೂ ಕೂಡ ಸಮಾನವಾದ ಸ್ಥಾನವನ್ನು ನೀಡಲಾಗುತ್ತಿದೆ.ಇಲ್ಲಿ ಅಧ್ಯಯನ ಮಾಡಿದ ಈ ಹಿಂದಿನ ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ಕಲಿಸಿದ ಪಾಠ ಮತ್ತು ಶಿಸ್ತು ,ಜೀವನ ಮೌಲ್ಯಗಳು ಅಳವಡಿಸಿಕೊಂಡು ಸಮಾಜದ ಉನ್ನತ ಸ್ಥಾನದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಅವಕಾಶ ಸಿಕ್ಕಿದಲ್ಲಿ ಅದೊಂದು ವಿದ್ಯಾರ್ಥಿಗಳ ಸೌಭಾಗ್ಯವೇ ಸರಿ.ಆದ್ದರಿಂದ ವಿದ್ಯಾರ್ಥಿಗಳು ತಮಗೆ ದೊರಕಿದ ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು.ಹಾಗೆ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಿದಾಗ ಕೇವಲ ಡಾಕ್ಟರ್ ಆಗುವುದು ಅಥವಾ ಇಂಜಿನಿಯರ್ ಆಗುವುದು ಮಾತ್ರವಲ್ಲ
ಸಾಕಷ್ಟು ಬೇರೆ ಬೇರೆ ಕೋರ್ಸ್ಗಳಲ್ಲಿ ಉನ್ನತ ಅಧ್ಯಯನ ಪಡೆಯುವಂತಹ ಅವಕಾಶಗಳು ಇರಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾ ಸಂಘದ ಅಧ್ಯಕ್ಷ ಸಿ ಎ ಪಿ.ಪ್ರಭಾಕರ್ ಮುಯ್ಯ ಮಾತನಾಡಿ , ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದದ್ದು ಸಾಧನೆಯಾಗಿದೆ ಆದರೆ ಇದು ಸಾಧನೆಯ ಆರಂಭ ಮಾತ್ರ ಇಲ್ಲಿಗೆ ಇದು ಅಂತ್ಯ ಆಗಬಾರದು ಇನ್ನಷ್ಟು ಕೂಡ ಹೆಚ್ಚಿನ ಸಾಧನೆ ಮಾಡಬೇಕು. ನಿರಂತರ ಪರಿಶ್ರಮ,ಸತತವಾದ ಅಧ್ಯಯನದಿಂದ ವಿದ್ಯಾರ್ಥಿಗಳು ಯಶಸ್ಸನ್ನ ಪಡೆಯಬಹುದೆಂದು ತಿಳಿಸಿದರು. ವಿದ್ಯಾ ಸಂಘದ ಕಾರ್ಯದರ್ಶಿ ಎಂ , ರಾಮದೇವ ಐತಾಳ ಶುಭಹಾರೈಸಿದರು. ಕೋಶಾಧಿಕಾರಿ ವಲೇರಿಯನ್ ಮೆನೇಜಸ್ ಮತ್ತು ಜೊತೆ ಕಾರ್ಯದರ್ಶಿ ಪಿ.ಮಂಜುನಾಥ್ ಉಪಾಧ್ಯ ಉಪಸ್ಥಿತರಿದ್ದರು. ಪ್ರಾಂಶುಪಾಲ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ ಶ್ರೀಪ್ರಿಯಾ ಪಿ ಅಡಿಗ ಮತ್ತು 9ನೇ ಸ್ಥಾನ ಗಳಿಸಿದ ಅಕ್ಷಯ ಶಾಸ್ತ್ರಿ,ವಿಭಾವನ ಹೇರಳೆ ಮತ್ತು ನಾಟಾ ಎಕ್ಸಾಂ ನಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಗಳಿಸಿದ ಶ್ರೀ ಲಕ್ಷ್ಮೀ ಸೋಮಯಾಜಿ ಇವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು .ಇದರೊಂದಿಗೆ 232 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರ ಪೆÇೀಷಕರ ಸಮ್ಮುಖದಲ್ಲೇ ಗುರುತಿಸಲಾಯಿತು ಉಪನ್ಯಾಸಕ ರವಿ ಕಾರಂತ್ ಧನ್ಯವಾದವಿತ್ತರು.ಉಪನ್ಯಾಸಕ ಸದಾಶಿವ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.