ಕೋಟ : ರೈತ ಕಾಯಕವೇ ಶ್ರೇಷ್ಠವಾದ ಕಾರ್ಯ ಇದಕ್ಕೆ ನೈಜ ಪ್ರೋತ್ಸಾಹಅಗತ್ಯ ಎಂದು ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಹೇಳಿದರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ರೈತ ಧ್ವನಿ ಸಂಘ ಕೋಟ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಗೆಳೆಯರ ಬಳಗ ಕಾರ್ಕಡ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಜೆಸಿಐ ಸಿನಿಯರ್ ಕೋಟ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 37ನೇ ಮಾಲಿಕೆಯಲ್ಲಿ ಗಿಳಿಯಾರು ಭೋಜ ಪೂಜಾರಿಯವರನ್ನು ಸನ್ಮಾನಿಸಿ ಮಾತನಾಡಿ ಯಾವುದೇ ಸರಕಾರಗಳು ಬರಲಿ ಆದರೆ ಕೃಷಿ ಕಾರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಕಷ್ಟ ಪಟ್ಟು ಬೆಳೆ ಬೆಳೆಯಲು ಶ್ರಮಿಸುವ ರೈತರ ಬೆಳೆಗಳು ನೆರೆಹಾವಳಿಗೆ ಹಾನಿಗೊಳ್ಳುತ್ತದೆ ಇದಕ್ಕೆ ಪರಿಹಾರ ಕ್ರಮ ಹಾಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ನೆರವು ನೀಡುವ ಕಾರ್ಯ ಮಾಡಲಿ ಅದೇ ರೀತಿ ಪಂಚವರ್ಣ ಸಂಸ್ಥೆ ರೈತರನ್ನು ಗುರುತಿಸುವ ಕಾಯಕ ಶ್ರೇಷ್ಠವಾದದ್ದು ಎಂದರು.
ಇದೇ ವೇಳೆ ಯುವ ಕೃಷಿಕ,ಕಂಬಳ ಸಾಧಕ ಭೋಜ ಪೂಜಾರಿ ಇವರುಗೆ ತಂದೆ ಗಾಡಿ ಕೂಸ ಪೂಜಾರಿ,ತಾಯಿ ಗಿರೀಜಾ,ಪತ್ನಿ ಸವಿತಾ ಸಮ್ಮುಖದಲ್ಲಿ ಸಾಧಕ ರೈತ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೂ ಪ್ರಾರಂಭದಲ್ಲಿ ಬಿಲ್ವ ಪತ್ರೆ ಗಿಡ ನೆಡುವ ಕಾರ್ಯಕ್ರಮಕ್ಕೆ ಗಾಡಿ ಕೂಸಣ್ಣ ದಂಪತಿಗಳು ಚಾಲನೆ ನೀಡಿದರು.ಭೋಜ ಪೂಜಾರಿ ದಂಪತಿಗಳು ಗೋ ಪೂಜೆ ನೆರವೆರಿಸಿದರು. ಜಿಲ್ಲಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸಂಯೋಜಕ ರವೀಂದ್ರ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು