Home » ಅಕ್ರಮದಲ್ಲಿ ಯಾರೇ ಭಾಗಿಯಾದರೂ ಕ್ರಮ
 

ಅಕ್ರಮದಲ್ಲಿ ಯಾರೇ ಭಾಗಿಯಾದರೂ ಕ್ರಮ

by Kundapur Xpress
Spread the love

ವಿಧಾನಪರಿಷತ್ತು : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿ ಮೇಲ್ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸುವಾಗ ಉದಾಹರಿಸಿದ ಗೊಬೆಲ್ಸ್‌  ಥಿಯರಿಯು ಸೋಮವಾದ ಬೆಳಗಿನ ಕಲಾಪವನ್ನು ಆಹುತಿ ಪಡೆದುಕೊಂಡಿತು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಮುದಾಯದ ಅಭಿವೃದ್ಧಿಗೆ ಮೀಸಲಿಡಲಾಗಿದ್ದ ಹಣ ದುರುಪಯೋಗವಾಗಿರುವ ಕುರಿತು ಸರಿಯಾದ ಉತ್ತರ ನೀಡುವಂತೆ ಕಳೆದ ವಾರ ಪ್ರತಿಪಕ್ಷ ಬಿಜೆಪಿ ಮಂಡಿಸಿದ ನಿಲುವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು.

ನಿಗಮದಲ್ಲಿ ಅವ್ಯವಹಾರ ಆಗಿರುವುದು ನಿಜ. ಈ ಅಕ್ರಮಕ್ಕೆ ಸರ್ಕಾರ ಅಥವಾ ಹಣಕಾಸು ಇಲಾಖೆಗೆ ಯಾವುದೇ ಸಂಬಂಧ ಇಲ್ಲ. ಯಾರಿಂದ ಅವ್ಯವಹಾರ ಆಗಿದೆ ಎಂಬುದರ ತನಿಖೆ ಆಗುತ್ತಿದೆ. ಬಳಿಕ ಸತ್ಯಾಂಶ ಹೊರಬೀಳಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದಲ್ಲಿ ಯಾರೇ ಮಾಡಿದರೂ ಸೂಕ್ತ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

   

Related Articles

error: Content is protected !!