ಕೋಟ: ಗುರುವಿನ ಮಹತ್ವ ಸರ್ವ ಶ್ರೇಷ್ಠವಾದದ್ದು ಎಂದು ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ.ರಾಜಾರಾಮ ಐತಾಳ್ ಹೇಳಿದರು. ಕೋಟದ ಸೇವಾಸಂಗಮ ಶಿಶುಮಂದಿರ ಇಲ್ಲಿ ಗುರುಪೂರ್ಣಿಮಾ ಅಂಗವಾಗಿ ಹಮ್ಮಿಕೊಂಡ ಬೌದ್ಧಕ್‍ನಲ್ಲಿ ಮಾತನಾಡಿ ಶಿಕ್ಷಕರನ್ನು ಹೇಗೆ ಗುರುವಾಗಿ ಸ್ವೀಕರಿಸುತ್ತಿರಿ ಅದೇ ರೀತಿ ಮಾತೃಪಿತೃರು ಗುರುವಿನ ಸ್ಥಾನದಲ್ಲಿ ಕಾಣಲು ಸಾಧ್ಯ, ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕಾರಭರಿತ ಶಿಕ್ಷಣದಿಂದ ವಂಚಿತರಾಗುವ ದಿನಗಳಲ್ಲಿ ನಾವಿದ್ದೇವೆ, ಈ ದಿಸೆಯಲ್ಲಿ ಗುರುವಿನ ಪರಂಪರೆ ಕೂಡಾ ಅಳಿವಿನಂಚಿನಗೆ ಸಾಗುತ್ತಿರುವ ಬಗ್ಗೆ ಖೇಧ ವ್ಯಕ್ತಪಡಿಸಿ, ಪೆÇೀಷಕರು ಈ ಬಗ್ಗೆ ಮಕ್ಕಳಿಗೆ ಆರಂಭಿಕ ಕಾಲಘಟ್ಟದಲ್ಲಿ ಅದರ ಮಹತ್ವ ಸಾರಬೇಕಿದೆ,ಪ್ರಾಥಮಿಕ ಹಂತದ ಶಿಕ್ಷಣ ಅತ್ಯಂತ ಮಹತ್ವದ ಘಟ್ಟವಾಗಿದ್ದು ಅದರ ತಳಹದಿಯನ್ನು ಗಟ್ಟಿಗೊಳಿಸಿ ಸುಸಂಸ್ಕೃತ ವಿದ್ಯಾರ್ಥಿಗಳನ್ನಾಗಿ ಮಾಡಬೇಕು ಎಂದು ಪೋಷಕರಿಗೆ ಕಿವಿಮಾತನ್ನಾಡಿದರು ಪುಟಾಣಿಗಳಿಂದ ಅಮೃತ ಬಿಂದು ಮತ್ತು ಅಮೃತ ವಚನಗನ್ನಾಡಿದರು. ಸೇವಾಸಂಗಮ ಶಿಶುಮಂದಿರ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಸ್ವಾಗತಿಸಿ ಪರಿಚಯಿಸಿದರು.ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.