Home » ಮರವಂತೆ ಬೀಚ್ ಪಾರ್ಕಿಂಗ್ ಸೌಲಭ್ಯ ಪರಿಶೀಲನೆಯ ಭರವಸೆ
 

ಮರವಂತೆ ಬೀಚ್ ಪಾರ್ಕಿಂಗ್ ಸೌಲಭ್ಯ ಪರಿಶೀಲನೆಯ ಭರವಸೆ

ಪ್ರವಾಸೋದ್ಯಮ ಸಚಿವರ ಸ್ಪಂದನೆ

by Kundapur Xpress
Spread the love

ಬೈಂದೂರು : ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮರವಂತೆ ಬೀಚ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಆಹಾರ ಮಳಿಗೆಗಳ ದುರಸ್ತಿಗೆ ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್. ಕೆ ಪಾಟೀಲ್ ರವರು ವಿಧಾನ ಸಭೆಯಲ್ಲಿ ಉತ್ತರಿಸಿದರು.
ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಮರವಂತೆ ಬೀಚ್ ನಲ್ಲಿ ಸೂಕ್ತವಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು ಜಿಲ್ಲಾಧಿಕಾರಿ ಗಳು ಹಾಗೂ ಅಧ್ಯಕ್ಷರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಉಡುಪಿ ಜಿಲ್ಲೆ ರವರು ಬೈಂದೂರು ತಾಲೂಕಿನ ತ್ರಾಸಿ ಮರವಂತೆ ಬೀಚ್ ನಲ್ಲಿ ಪ್ರವಾಸೋದ್ಯಮ ಇಲಾಖೆಯ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹಾಗೂ ಆಹಾರ ಮಳಿಗೆಗಳ ದುರಸ್ಥಿ ಕಾಮಗರಿಗಳನ್ನು ಕೈಗೊಳ್ಳಲು 39.50 ಲಕ್ಷದ ಅಂದಾಜು ಪಟ್ಟಿ ಯನ್ನು ಸಲ್ಲಿಸಿದ್ದು 2023-24 ನೇ ಸಾಲಿನಲ್ಲಿ ಅನುದಾನದ ಕೊರತೆಯಿಂದ ಈ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಹಾಗಾಗಿ ಇಲಾಖೆಗೆ ಆಯವ್ಯಯ ದಲ್ಲಿ ಒದಗಿಸುವ ಅನುದಾನದ ಲಭ್ಯತೆಗನುಗುಣವಾಗಿ ಪರಿಶೀಲನೆ ನಡೆಸಲಾಗುವುದು ಎಂದರು.

   

Related Articles

error: Content is protected !!