ಮಂಗಳೂರು : ಮಳೆ ನೀರು ಹರಿಯುತ್ತಿದ್ದ ತೋಡಿಗೆ ಬಿದ್ದ ಕುಡುಕ ವ್ಯಕ್ತಿಯೋರ್ವನನ್ನು ನಗರದ ಸಂಚಾರಿ ಪೊಲೀಸರು ತೋಡಿನಿಂದ ಮೇಲೆತ್ತಿ ರಕ್ಷಿಸಿದ ಘಟನೆ ಮಂಗಳೂರಿನ ಪಂಪವೆಲ್ ಬಳಿ ನಡೆದಿದೆ
ಶುಕ್ರವಾರ ಪಂಪ್ವೆಲ್ ಸಮೀಪ ರಸ್ತೆ ಬದಿಯ ದೊಡ್ಡ ತೋಡಿನಲ್ಲಿ ಬಿದ್ದುಕೊಂಡಿದ್ದ ವ್ಯಕ್ತಿಯನ್ನು ಗಮನಿಸಿದ ಸಾರ್ವಜನಿಕರು ಸಮೀಪದಲ್ಲೇ ನಿಂತಿದ್ದ ಸಂಚಾರಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು
ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಹೆಡ್ಾನ್ಸ್ಟೆಬಲ್ ತಿಪ್ಪೇಸ್ವಾಮಿ ಮತ್ತು ವಿಲ್ಸನ್ ಫೆರ್ನಾಂಡಿಸ್ ಅವರು ಸಾರ್ವಜನಿಕರ ಸಹಕಾರದಿಂದ ಆತನನ್ನು ಮೇಲಕ್ಕೆತ್ತಿದರು
ಸುಮಾರು 6 ಅಡಿಗಿಂತಲೂ ಹೆಚ್ಚು ಆಳದ ಈ ತೋಡಿನಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ತೋಡಿಗೆ ಬಿದ್ದಿದ್ದಾನೆ