ಹೊಸದಿಲ್ಲಿ: ಅಯೋಧ್ಯೆಯ ಶ್ರೀರಾಮನ ಸ್ಮರಣಾರ್ಥ ಇದೇ ಮೊದಲ ಬಾರಿಗೆ ಭಾರತ ಮತ್ತು ಲಾವೋಸ್ ಜಂಟಿಯಾಗಿ ಶನಿವಾರ ಅಂಚೆ ಚೀಟಿ ಬಿಡುಗಡೆಗೊಳಿಸಿದ್ದು, ರಾಮಲಲ್ಲಾ ಚಿತ್ರ ಒಳಗೊಂಡ ವಿಶ್ವದ ಮೊದಲ ಅಂಚೆ ಚೀಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಲಾವೋಸ್ ಭೇಟಿ ವೇಳೆ ಈ ಅಂಚೆ ಚೀಟಿ ಅನಾವರಣಗೊಳಿಸಲಾಗಿದೆ. ಎರಡು ಅಂಚೆ ಚೀಟಿಗಳ ಈ ಸೆಟ್ನಲ್ಲಿ ಒಂದರಲ್ಲಿ ಲಾವೋಸ್ನ ಪ್ರಾಚೀನ ರಾಜಧಾನಿ ಲುವಾಂಗ್ಪ್ರಬಾಂಗ್ನ ಭಗವಾನ್ ಬುದ್ದನ ಚಿತ್ರವಿದ್ದರೆ, ಇನ್ನೊಂದರಲ್ಲಿ ಭಗವಾನ್ ರಾಮನ ರಾಜಧಾನಿ ಆಯೋಧ್ಯೆಯ ರಾಮಲಲಾನ ಚಿತ್ರವಿದೆ. ಈ ಅಂಚೆಚೀಟಿಗಳು ಎರಡು ರಾಷ್ಟ್ರಗಳ ನಡುವಿನ ರಾಮಾಯಣ ಮತ್ತು ಬೌದ್ದಧರ್ಮದ ಧಾರ್ಮಿಕ- ಸಾಂಸ್ಕೃತಿಕ ಸಂಬಂಧಕ್ಕೆ ಸಾಕ್ಷಿಯಾಗಿವೆ.