ಕೋಟ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇವರ ಸಹಕಾgದೊಂದಿಗೆ ಯಕ್ಷಗಾನದ ಹಿರಿಯ ಕಲಾವಿದ ಕೋಟ ಶಿವಾನಂದರು ತಮ್ಮ“ ನಾದಾಮೃತ ಕೋಟ” ಸಂಸ್ಥೆಯ ಸಂಯೋಜನೆಯಲ್ಲಿ ಆಗಸ್ಟ್ ಒಂದರಿಂದ ತಾಳಮದ್ದಲೆ ಸಪ್ತಾಹವನ್ನು ಆಯೋಜಿಸಿದ್ದು. ಆಗಸ್ಟ್ ಏಳರ ತನಕ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಸಂಜೆ 5.00 ರಿಂದ ರಾತ್ರಿ 8.30 ರ ತನಕ ತಾಳಮದ್ದಲೆ ನಡೆಯಲಿದೆ. ಆ.01 ಸಂಜೆ ಐದು ಗಂಟೆಗೆ ಕಲಾಪೋಷಕ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಅಧ್ಯಕ್ಷರಾದ ಆನಂದ.ಸಿ.ಕುಂದರ್ ರವರು ಸಪ್ತಾಹ ಉದ್ಗಾಟಿಸಲಿದ್ದು, ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಸೀತಾರಾಮ ಕಾರಂತ, ಕರ್ನಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ವಿಷ್ಣು ಮೂರ್ತಿ ಉಪಾಧ್ಯಾಯ, ಮಂಗಳೂರಿನ ಕಲ್ಕೂರ್ ಪ್ರತಿಷ್ಟಾನದ ಪ್ರದೀಪ್ ಕುಮಾರ್ ಕಲ್ಕೂರ್, ಕಲಾಪ್ರೇಮಿ ಎಚ್.ಜನಾರ್ದನ ಹಂದೆ ಹಾಗೂ ಕುಂದಾಪುರದ ಆದರ್ಶ ಆಸ್ಪತ್ರೆಯ ಪ್ರವರ್ತಕ ಡಾ| ಆದರ್ಶ ಹೆಬ್ಬಾರ್ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಶ್ರೀಧರ ಡಿ.ಎಸ್ ರಚಿತ ಭ್ರಗು ಶಾಪ, ಪ್ರೋ|ಎಂ.ಎ. ಹೆಗಡೆ ರಚಿತ ತ್ರಿಶಂಕು ಚರಿತ್ರೆ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಕಚ ದೇವಯಾನಿ, ಮಧುಕುಮಾರ್ ಬೋಳೂರು ರಚಿತ ಸುದರ್ಶನ ವಿಜಯ, ಪ್ರೋ| ಎಂ.ವಿ.ಹೆಗಡೆ ರಚಿತ ಸೀತಾ ವಿಯೋಗ, ºಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ವಾಮನ ಚರಿತ್ರೆ, ºಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಧರ್ಮಾಂಗದ ದಿಗ್ವಿಜಯ ಕಥಾನಕಗಳ ತಾಳ ಮದ್ದಲೆಯು ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದೆ. ಆ. 07 ರಂದು ಸಂಜೆ ಸಮಾರೋಪ ಕಾರ್ಯಕ್ರಮ ಆನಂದ್.ಸಿ.ಕುಂದರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಕಲಾರಂಗ ಉಡುಪಿಯ ಉಪಾಧ್ಯಕ್ಷ ಪಳ್ಳಿ ಕಿಶನ್ ಕುಮಾರ್ ಹೆಗ್ಡೆ, ಗುರು ನರಸಿಂಹ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷರಾದ ಅನಂತ ಪದ್ಮನಾಭ ಐತಾಳ, ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಹಾಗೂ ಉಡುಪಿಯ ಭುವನ ಪ್ರಸಾದ ಹೆಗ್ಡೆಯವರು ಉಪಸ್ಥಿತರಿರುತ್ತಾರೆಂದು ಸಂಘಟಕ ಕೋಟ ಶಿವಾನಂದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ