ಕೋಟ : ಸ್ನೇಹಕೂಟ ಮಣೂರು ಇದರ ಜುಲೈ ತಿಂಗಳ ಕಾರ್ಯಕ್ರಮವನ್ನು ಕೋಟ ಮಹಿಳಾ ಮಂಡಳಿ ಸಭಾಭವನದಲ್ಲಿ ಭಾನುವಾರ ಜರಗಿತು.
ರಾಜ್ಯ ಪ್ರಶಸ್ತಿ ಪುರಸ್ಕ್ರತ ಶಿಕ್ಷಕ,ಸಾಹಿತಿ ನರೇಂದ್ರ ಕುಮಾರ್ ಕೋಟ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಕನಸಿದ್ದರೇ ಮಾರ್ಗ, ಕನಸು ಕಾಣಿ, ಪ್ರಯತ್ನ ಪಡಿ, ಚಿಂತೆ ಬಿಟ್ಟು ಚಿಂತನೆ ಮಾಡಿ ,ಆರೋಗ್ಯವಂತರಾಗಿ ನಿಮ್ಮನ್ನು ನೀವು ಸಾಮಾಜಿಕವಾಗಿ ತೊಡಗಿಸಿಕೊಳ್ಳಿ ,ಆತ್ಮವಿಶ್ವಾಸ ವರ್ಧನೆ ಮಾಡಿಕೊಳ್ಳಿ ಎಂಬುದಾಗಿ ಸದಸ್ಯರಿಗೆ ಕಿವಿ ಮಾತನ್ನು ನುಡಿದರು. ಇದೇ ವೇಳೆ ಶ್ರೀಯುತರನ್ನು ಗೌರವಿಸಲಾಯಿತು
ವಿಶೇಷ ಆಹ್ವಾನಿತರಾಗಿ ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ವಿಷ್ಣುಮೂರ್ತಿ ಮಯ್ಯ ಭಾಗವಹಿಸಿದ್ದರು. ಅತಿಥಿಯಾಗಿ ಮಹಿಳಾ ಮಂಡಳ ಕೋಟ ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್,ಮಣೂರು ಸ್ನೇಹಕೂಟದ ಸಂಚಾಲಕಿ ಭಾರತಿ ವಿ.ಮಯ್ಯ ಉಪಸ್ಥಿತರಿದ್ದರು. ಸದಸ್ಯರಿಗಾಗಿ ವೈವಿಧ್ಯಮಯ ಆಟೋಟ ಸ್ಪರ್ಧೆಗಳು ಏರ್ಪಡಿಸಿದ್ದು ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.ಸದಸ್ಯೆ ಜ್ಯೋತಿ ಕೆದ್ಲಾಯ ಸ್ವಾಗತಿಸಿದರು.ಕಾರ್ಯಕ್ರಮವನ್ನು ಸದಸ್ಯೆ ಸ್ಮೀತಾ ನಿರೂಪಿಸಿದರು.ವನೀತ ಉಪಾಧ್ಯಾಯ ಧನ್ಯವಾದಗೈದರು