ಕೋಟ : ಕೋಟ ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಆಯೋಗದ ಅನುದಾನ ಬಳಕೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಬುಧವಾರ ಕೋಟ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಅರಣ್ಯ ಅಧಿಕಾರಿ ಅನುಷಾ ಭಟ್ ವಹಿಸಿದ್ದರು. ತಾಲೂಕು ವ್ಯವಸ್ಥಾಪಕರಾದ ಹುಸೇನ್ ಸಾಬದಾ. ಕರನಾಚಿ ಅವರು ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸು ಆಯೋದ ಬಗ್ಗೆ ಗ್ರಾಮಸ್ಥರ ಮುಂದೆ ಮಂಡಿಸಿದರು. ಈ ವೇಳೆ ಕೆಲವೊಂದು ಯೋಜನೆಗಳ ಬಗ್ಗೆ ಗ್ರಾಮಸ್ಥರ ಎದುರಿನಲ್ಲಿ ಪಂಚಾಯತ್ ಸದಸ್ಯರಿಗೆ ಹಾಗೂ ಪಂಚಾಯತ್ ಅಧ್ಯಕ್ಷರ ನಡುವೆ ಮಾತಿನ ಜಟಾಪಟಿ ನಡೆಯಿತು. ವಿವಿಧ ಕಾಮಗಾರಿಗಳಲ್ಲಿ ಗೊಂದಲವಿದೆ ಈ ಬಗ್ಗೆ ಸಹಿ ಇಲ್ಲದೆ ಹಣ ಪಾವತಿ ನಡೆದಿದೆ ಎಂದು ಪಂಚಾಯತ್ ಅಧ್ಯಕ್ಷೆ ಮಣೂರು ದ್ಯಾವಸ ಕೃಷಿ ಭೂಮಿಯ ನೀರು ಹರಿಯಲ್ಪಡುವ ತೋಡು ಹೂಳೆತ್ತುವ ಕಾಮಗಾರಿಯಲ್ಲಿ ಲೋಪವೆಸಗಲಾಗಿದೆ ಎಂದರು. ಈ ಬಗ್ಗೆ ಪಂಚಾಯತ್ ಸದಸ್ಯರು ಮಾತನಾಡಿ ಒರ್ವ ಪಂಚಾಯತ್ ಅಧ್ಯಕ್ಷೆಯಾಗಿ ಸಮರ್ಪಕಗೊಂಡ ಕಾಮಗಾರಿಯನ್ನು ಹೋಂಬುಡ್ಸ್ ಮೆನ್ ದೂರು ನೀಡಿದ್ದಾರೆ ಇದ್ಯಾವ ನ್ಯಾಯ, ಪಂಚಾಯತ್ ನ್ಯಾಯ ಸಮ್ಮತ ಕಾಮಗಾರಿಗೆ ದೂರು ನೀಡುವುದು ಸಮಂಜಸವೇ ಎಂದು ಪಂಚಾಯತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಈ ಬಗ್ಗೆ ಕೆಲ ಗ್ರಾಮಸ್ಥರು ಈ ಬಗ್ಗೆ ಸ್ಪಷ್ಟೀಕರಣ ಅಗತ್ಯವಾಗಿದೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಂಚಾಯತ್ ಸದಸ್ಯರು ಮಾಹಿತಿ ನೀಡಿ ಹಿಂದಿನ ಅವಧಿಯಲ್ಲಾದ ಕಾಮಗಾರಿಗಳಿಗೆ ಬಿಲ್ಲ ಪಾವತಿ ಅಗತ್ಯವಾಗಿದೆ ಅದರಂತೆ ಪಂಚಾಯತ್ ನಿಯಮಾವಳಿಯಂತೆ ಸಂಬAಧಿಸಿದ ಇಲಾಖೆ ತನಿಖೆ ನಡೆಸಿ ಬಿಲ್ ಪಾವತಿ ನಡೆದಿದೆ ಇದರಲ್ಲಿ ಯಾವದೇ ಹುರುಳಿಲ್ಲ ಎಂದರು. ಪAಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಕಾರ್ಯದರ್ಶಿ ಶೇಖರ್ ಮರವಂತೆ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.