Home » ಮೂರು ತಿಂಗಳಲ್ಲಿ ಬೈಂದೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪೂರ್ಣ
 

ಮೂರು ತಿಂಗಳಲ್ಲಿ ಬೈಂದೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪೂರ್ಣ

ಶಾಸಕರ ಪ್ರಶ್ನೆಗೆ ಸಾರಿಗೆ ಸಚಿವರ ಉತ್ತರ

by Kundapur Xpress
Spread the love

ಬೈಂದೂರು : ಇಲ್ಲಿನ ನಿರ್ಮಾಣ ಹಂತದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂದುವರಿದ ಕಾಮಗಾರಿಗೆ 247 ಲಕ್ಷ ದ ಕಾಮಗಾರಿ ಟೆಂಡರ್ ಆಗಿದ್ದು ಮಳೆಗಾಲ ಹೊರತು ಪಡಿಸಿ 3 ತಿಂಗಳೊಳಗೆ ನಿಲ್ದಾಣದ ಕಾಂಕ್ರಿಟ್ ನೆಲಹಾಸು ಕಾಮಗಾರಿ ಮುಕ್ತಾಯ ಗೊಳಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಭರವಸೆ ನೀಡಿದ್ದಾರೆ.
ವಿಧಾನ ಸಭಾ ಅಧಿವೇಶನನದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ, ಮುಂದುವರಿದು ಬಸ್ ನಿಲ್ದಾಣದ ಆವರಣ ಗೋಡೆ ಸಹಿತ ಇನ್ನಿತರ ಅಗತ್ಯ ಮೂಲ ಸೌಕರ್ಯಕ್ಕೆ ಅಗತ್ಯ ಅನುದಾನ ನೀಡಲು ಶಾಸಕರು ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅಗತ್ಯ ಅನುದಾನ ಒದಗಿಸುವ ಬಗ್ಗೆಯೂ ತಿಳಿಸಿದ್ದಾರೆ.

   

Related Articles

error: Content is protected !!