Home » ಆಟಿ ಅಮಾವಾಸ್ಯೆ ಸಮುದ್ರ ಸ್ನಾನ
 

ಆಟಿ ಅಮಾವಾಸ್ಯೆ ಸಮುದ್ರ ಸ್ನಾನ

by Kundapur Xpress
Spread the love

ಕೋಟ : ಕರ್ಕಾಟಕ ಅಮಾವಾಸ್ಯೆ ಅಂಗವಾಗಿ ಇಲ್ಲಿನ  ಮರವಂತೆ ಕೋಡಿ ಸಮುದ್ರ ಕಿನಾರ ಕೋಟ ಮಣೂರು ಪಡುಕರೆ,ಕೋಟತಟ್ಟು ಪಡುಕರೆ,ಸಾಲಿಗ್ರಾಮ ಪಾರಂಪಳ್ಳಿ ಪಡುಕರೆ,ಕೋಡಿ ಕನ್ಯಾಣ,ಹೊಸಬೇಂಗ್ರೆ, ತೆಕ್ಕಟ್ಟೆ ವ್ಯಾಪ್ತಿಯ ಕೊಮೆ ಇತರ ಭಾಗಗಳಲ್ಲಿನ ಸಮುದ್ರ ತೀರ ಪ್ರದೇಶದಲ್ಲಿ ಸಾವಿರಾರು ಜನ ಸಮುದ್ರ ಸ್ನಾನಗೈದರು.
ನಿರಂತರ ಮಳೆಯ ನಡುವೆ ಆಟಿ ಅಮಾವಾಸ್ಯೆಗೆ ಮುಂಜಾನೆ ಮಳೆ ಅಲ್ಪ ವಿರಾಮದ ಹಿನ್ನಲ್ಲೆಯಲ್ಲಿ ಸಾಕಷ್ಟು ಜನ ಪೂರ್ವಾಹ್ನ ಕಷಾಯ ಸೇವಿಸಿ ಸಮುದ್ರಸ್ನಾನಕ್ಕೆ ಆಗಮಿಸಿದರು.ಸಮುದ್ರ ತೀರ ಪ್ರದೇಶದಲ್ಲಿ ಅರ್ಚಕ ವೃಂದ ವಿಶೇಷವಾಗಿ ತೀರ್ಥ ಪ್ರಸಾದ ವಿತರಿಸಿದರು.

   

Related Articles

error: Content is protected !!