ಸಿದ್ದಾಪುರ : ಯೋಗಾಸನ ಕೇವಲ ಆಸನವಲ್ಲ ಅದು ದೇಹ ಮತ್ತು ಮನಸ್ಸುಗಳನ್ನು ಸೀಮಿತವಾಗಿಡುವ ಸಾಧನ ಯೋಗ ವಿಚಾರ ಪುರಾಣಗಳಲ್ಲಿ ಉಲ್ಲೇಖವಿದೆ. ಯೋಗದ ಆರಾಧ್ಯ ದೈವ ಶಿವನಾಗಿರುತ್ತಾನೆ. ಯೋಗ ಗುರು ಪತಂಜಲಿ ಇದನ್ನು ಜಗತ್ತಿಗೆ ಬರೆಹ ರೂಪದಲ್ಲಿ ನೀಡಿದರು. ಎಂದು ಶೇಖರ ಶೆಟ್ಟಿಗಾರ ನಿವೃತ್ತ ಮುಖ್ಯೋಪಾಧ್ಯಾಯರು ಆರ್ಡಿ ಉದ್ಘಾಟನಾ ಭಾಷಣದಲ್ಲಿ ನುಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಸರಸ್ವತಿ ವಿದ್ಯಾಲಯ ಸಿದ್ದಾಪುರ ಜಂಟಿ ಆಶ್ರಯದಲ್ಲಿ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆ ಸರಸ್ವತಿ ವಿದ್ಯಾಲಯ ಸಿದ್ದಾಪುರದ ಸಭಾಂಗಣದಲ್ಲಿ ನಡೆಯಿತು .
ವೇದಿಕೆಯಲ್ಲಿ ಸರಸ್ವತಿ ವಿದ್ಯಾಲಯ ಸಿದ್ದಾಪುರ ಆಡಳಿತ ಮಂಡಳಿಯ ಅಧ್ಯಕ್ಷರು ಗೋಪಾಲಕೃಷ್ಣ ಕಾಮತ್ , ಆಡಳಿತ ಮಂಡಳಿಯ ಸದಸ್ಯರು ಶ್ರೀನಾಥ್ ಪೈ , ವಿದ್ಯಾಭಾರತಿ ಕರ್ನಾಟಕ ಪ್ರಾಂತ ಯೋಗ ಶಿಕ್ಷಣ ಪ್ರಮುಖ್ ಮಂಜುನಾಥ ಬೆಂಗಳೂರು, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀಯುತ ಪಾಂಡುರಂಗ ಪೈ , ಕಾರ್ಯದರ್ಶಿ ಮಹೇಶ ಹೈಕಾಡಿ , ಜಿಲ್ಲಾ ಯೋಗ ಪ್ರಮುಖ್ ಸಂಜಯ್ , ಅಂಪಾರು ವಲಯದ ಶಿಕ್ಷಣ ಸಂಯೋಜಕರು ಶಂಕರ್. ಯು , ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತಾ , ಆಡಳಿತಾಧಿಕಾರಿ ಶ್ರೀಮತಿ ಸೌಭಾಗ್ಯ , ಸರಸ್ವತಿ ಶಿಶುಮಂದಿರದ ಸಂಯೋಜಕಿ ಜಯಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಪ್ರಾಂತ ಯೋಗಾಸನ ಸ್ಪರ್ಧೆಗೆ ಬೆಳಗಾವಿ ಜಿಲ್ಲೆ, ಬೆಂಗಳೂರು ಜಿಲ್ಲೆ , ಶಿವಮೊಗ್ಗ ಜಿಲ್ಲೆ, ಮಂಗಳೂರು ಜಿಲ್ಲೆ , ಉಡುಪಿ ಜಿಲ್ಲೆ , ಕಲಬುರ್ಗಿ ಜಿಲ್ಲೆಯಿಂದ ವಿದ್ಯಾರ್ಥಿಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. 116 ವಿದ್ಯಾರ್ಥಿಗಳು , ಸ್ಪರ್ಧಿಸಿದ್ದರು.61ಶಿಕ್ಷಕರು , ಸಮಿತಿಯ ಸದಸ್ಯರು , ಕಾರ್ಯಕರ್ತರು ಸೇರಿದಂತೆ ಒಟ್ಟು 147 ಮಂದಿ ಭಾಗವಹಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತ ಸ್ವಾಗತಿಸಿ , ಆಡಳಿತ ಅಧಿಕಾರಿ ಶ್ರೀಮತಿ ಸೌಭಾಗ್ಯ ವಂದಿಸಿ , ಮಾತಾಜಿ ಶ್ರೀಮತಿ ಶಶಿಕಲಾ ನಿರೂಪಿಸಿದರು.