Home » ಹೊಳೆ ಹೂಳಿನ ಸಮಸ್ಯೆಯಿಂದ ಮುಕ್ತಿಗೊಳಿಸಿ
 

ಹೊಳೆ ಹೂಳಿನ ಸಮಸ್ಯೆಯಿಂದ ಮುಕ್ತಿಗೊಳಿಸಿ

ಸಂಸದರಿಗೆ ಮನವಿ

by Kundapur Xpress
Spread the love

ಕೋಟ : ಕೋಟದ ಮಣೂರಿನಿಂದ ಗಿಳಿಯಾರು, ಚಿತ್ರಪಾಡಿ ಕಾರ್ಕಡದವರೆಗೆ ಹೊಳೆ ಹೂಳಿನ ಸಮಸ್ಯೆಯಿಂದ ಕೃತಕ ನೆರೆ ಸೃಷ್ಟಿಯಾಗಿದ್ದು ರೈತರು ಬೆಳೆದ ಕೃಷಿ ಕೊಳೆಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಹೊಳೆಯ ಹೂಳೆತ್ತಬೇಕು ಎಂದು ಆಗ್ರಹಿಸಿ ಕೋಟದ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ  ಕೋಟ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಸಭೆ ನಡೆಸಿ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಸಮಸ್ಯೆ ಬಗ್ಗೆ ಈ ಹಿಂದೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಪರಿಹಾರ ಸಿಗದಿರುವುದರಿಂದ ಆ.7 ರಂದು ಕೋಟ ಹಿರೇ ಮಹಾಲಿಂಗೇಶ್ವರ ದೇಗುಲದ ಸಮೀಪ ರೈತರು ಸಾಂಕೇತಿಕ ಉಪವಾಸ ಸತ್ಯಾಗೃಹ ಮಾಡಲು ತೀರ್ಮಾನಿಸಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆ ಫಲಿಸದಿದ್ದರೆ ಮುಂದೆ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ತಿಳಿಸಿದರು.
ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಮಣೂರು ಜಯರಾಮ ಶೆಟ್ಟಿ, ವಕೀಲ ಟಿ.ಮಂಜುನಾಥ್ ಗಿಳಿಯಾರು, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ, ಸುಭಾಸ್ ಶೆಟ್ಟಿ ಬೋÃಜ ಪೂಜಾರಿ ಗಿಳಿಯಾರು, ಕೀರ್ತಿಶ್ ಪೂಜಾರಿ ಕೋಟ, ಹಂಡಿಕೆರೆ ರಾಘು ಶೆಟ್ಟಿ, ಸಿದ್ದ ದೇವಾಡಿಗ ಹರ್ತಟ್ಟು, ಚಂದ್ರ ಹಾಡಿಕೆರೆ, ತಿಮ್ಮ ಕಾಂಚನ್ ಹರ್ತಟ್ಟು, ನಿತ್ಯಾ ಶೆಟ್ಟಿ ಹರ್ತಟ್ಟು ರಮೇಶ್ ಮೆಂಡನ್ ಸಾಲಿಗ್ರಾಮ, ಮಹಾಬಲ ಪೂಜಾರಿ ಹರ್ತಟ್ಟು ಮಹೇಶ್ ಶೆಟ್ಟಿ ದ್ಯಾವಸ, ಗಿರೀಶ್ ದೇವಾಡಿಗ ಹರ್ತಟ್ಟು ಗಿರೀಶ್ ನಾಯ್ ಕೋಟ, ಭಾಸ್ಕರ್ ಶೆಟ್ಟಿ ಮಣೂರು ಪಡುಕರೆ, ಸುರೇಶ್ ಪೂಜಾರಿ ಹರ್ತಟ್ಟು ಇದ್ದರು.

   

Related Articles

error: Content is protected !!