ಢಾಕಾ : ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ವಿರುದ್ಧ ಸಿಡಿದೆದ್ದ ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಗಳು, ಸೋಮವಾರ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದು, ಮನೆಯಲ್ಲಿದ್ದ ಕಂಡಕಂಡ ವಸ್ತುಗಳನ್ನು ದೋಚಿದ್ದಾರೆ ಹಾಗೂ ಅವರ ಬೆಡ್ ರೂಮಿಗೆ ನುಗ್ಗಿ ಪ್ರಧಾನಿ ಮಲಗುವ ಬೆಡ್ಡಿನಲ್ಲಿ ಮಲಗಿ ಆನಂದ ಅನುಭವಿಸಿದ್ದಾರೆ. ಇದಲ್ಲದೆ ಸಂಸತ್ತಿಗೂ ನುಗ್ಗಿ ಸಂಸದರ ಸೀಟು, ಸಭಾಧ್ಯಕ್ಷ ಪೀಠ, ಪ್ರಧಾನಿ ಕೂರುವ ಸ್ಥಾನದಲ್ಲಿ ಕೂತು ಮಜಾ ಮಾಡಿದ್ದಾರೆ.
ಹಸೀನಾ ಸರ್ಕಾರದ ಔದ್ಯೋಗಿಕ ಮೀಸಲು ನೀತಿ ವಿರುದ್ಧ ಕೆಲವು ದಿನಗಳಿಂದ ಬಾಂಗ್ಲಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಸೋಮವಾರ ತೀವ್ರ ಸ್ವರೂಪ ಪಡೆದು ಕೊಂಡಿತು. ಪ್ರತಿಭಟನಾಕಾರರು ಹಸೀನಾ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಅಪಾಯದ ಮುನ್ಸೂಚನೆ ಅರಿತ ಹಸೀನಾ ಸೇನಾ ವಿಮಾನದಲ್ಲಿ ವಿದೇಶಕ್ಕೆ ಪಲಾಯನ ಮಾಡಿದರು