ಮಂಡ್ಯ : ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ‘ಮೈಸೂರು ಚಲೋ’ ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಮದ್ದೂರು ತಾಲೂಕು ಮಂಡ್ಯ ವಲಯದ ವರೆಗೆ ಸುಮಾರು 21 ಕಿ. ಮೀ.ದೂರ ಸಾಗಿತು. ಬುಧವಾರ ಪಾದಯಾತ್ರೆ ಮಂಡ್ಯದಲ್ಲಿ ಹಾದು ಹೋಗಲಿದೆ.
ಮಂಗಳವಾರ ಬೆಳಗ್ಗೆ ಮದ್ದೂರು ತಾಲೂಕು ನಿಡಘಟ್ಟದ ಸುಮಿತ್ರಾದೇವಿ ಕಲ್ಯಾಣ ಮಂಟಪದಲ್ಲಿ 4ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಿಜೆಪಿರಾಜ್ಯಾಧ್ಯಕ್ಷಬಿ.ವೈ.ವಿಜಯೇಂದ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಅಶ್ವಥ್ ನಾರಾಯಣ, ಡಿ.ಸಿ.ತಮಣ್ಣ ಮತ್ತಿತರರು ಪಾದಯಾತ್ರೆಗೆ ಚಾಲನೆ ನೀಡಿದರು. ಕೀಲು ಬೊಂಬೆ, ಜಾನಪದ ಕಲಾತಂಡಗಳು ಪಾದಯಾತ್ರೆಗೆ ಮೆರುಗು ನೀಡಿದವು
ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಕಾರ್ಯ ಕರ್ತರು ಪಾದಯಾತ್ರೆಯಲ್ಲಿ ಸಾಗಿ ಬಂದ ನಾಯಕರಿಗೆ ಪುಷ್ಪವೃಷ್ಠಿ ಸುರಿಸಿ, ಬೃಹತ್ ಗಾತ್ರದ ಹೂವು, ಹಣ್ಣಿನ ಹಾರ ಹಾಕಿ, ಅದ್ದೂರಿ ಸ್ವಾಗತ ಕೋರಿದರು.