ನವದೆಹಲಿ : ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಅನರ್ಹಗೊಂಡಿದ್ದಾರೆ. ಇದು ಭಾರತದ ಪಾಲಿಗೆ ದೊಡ್ಡ ಆಘಾತವಾಗಿದ್ದು ಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದ್ದ ವಿನೇಶ್ ಫೋಗಟ್ ಭಾರತಕ್ಕೆ ಸ್ವರ್ಣ ತರುತ್ತಾರೆ ಎಂದು ಕೋಟಿ ಕೋಟಿ ಭಾರತೀಯರು ನಿರೀಕ್ಷೆ ಇಟ್ಟುಕೊಂಡಿದ್ದು ಅಂತಿಮ ಹಣಾಹಣೆಯನ್ನು ಎದುರು ನೋಡುತ್ತಿದ್ದರು.
ಅವರು ಅನರ್ಹಗೊಂಡಿದ್ದಾರೆ ಎಂದಾಗ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಕಾರ್ಮೋಡ ಆವರಿಸಿತು. ವಿನೇಶ್ ಅಧಿಕೃತವಾಗಿ ಅನರ್ಹಗೊಂಡಿದ್ದರಿಂದ ಯಾವ ದಾರಿಯೂ ಇರಲಿಲ್ಲ, ರೆಸ್ಲಿಂಗ್ ಫೆಡರೇಶನ್ ಮೇಲ್ಮನವಿ ಸಲ್ಲಿಸಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ
ತೂಕ ಇಳಿಸಲು ರಾತ್ರಿಯಿಡೀ ಪರದಾಟ
29ರ ಹರಯದ ವಿನೇಶ್ ಫೋಗಟ್ ತಾವು 50 ಕೆಜಿ ವಿಭಾಗದಲ್ಲಿ2 ಕೆಜಿ ಹೆಚ್ಚು ತೂಗುತ್ತಿರುವುದು ಮಂಗಳವಾರ ರಾತ್ರಿಯೇ ತಿಳಿದುಬಂದಿತ್ತು. ಅದಕ್ಕಾಗಿ ಅವರು ಬುಧವಾರ ಮುಂಜಾನೆ ವೇಳೆಗೆ ತೂಕ ಇಳಿಸಿಕೊಳ್ಳಲು ರಾತ್ರಿಯಿಡೀ ಪ್ರಯತ್ನಿಸಿದ್ದರು. ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ನಡೆಸಿದ್ದರು. ಅವರ ತಲೆಕೂದಲು ಕತ್ತರಿಸಲಾಗಿತ್ತು. ಆಕೆಯ ರಕ್ತವನ್ನು ಕೂಡಾ ತೆಗೆಯಲಾಗಿತ್ತು ಅದರೂ ಅವರ ತೂಕ 100 ಗ್ರಾಂ ಹೆಚ್ಚಾಗಿತ್ತು
ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ ಪ್ರತಿಕ್ರಿಯೆ ನೀಡಿದ್ದು ಪದಕ ಗೆಲ್ಲಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದಿದ್ದಾರೆ