Home » ಸಿದ್ದರಾಮಯ್ಯ ಕ್ಲೀನ್ ಸಿಎಂ ಅಲ್ಲ : ಸಿ.ಟಿ.ರವಿ
 

ಸಿದ್ದರಾಮಯ್ಯ ಕ್ಲೀನ್ ಸಿಎಂ ಅಲ್ಲ : ಸಿ.ಟಿ.ರವಿ

by Kundapur Xpress
Spread the love

ಮಂಡ್ಯ : ಸಿದ್ದರಾಮಯ್ಯನವರೇ ನೀವು ಕ್ಲೀನ್ ಸಿಎಂ ಅಲ್ಲ ಕರೆಸ್ಟ್ ಸಿಎಂ. ನಿಮಗೆ ಸತ್ಯ ಎದುರಿಸುವ ಧೈರ್ಯವಿಲ್ಲದೆ ಪಲಾಯನವಾದ ಮಾಡಿದ್ದೀರಿ. ಫಲಾನುಭವಿಯಾಗಿರುವುದರಿಂದಲೇ ಪಲಾಯನ ಮಾಡುತ್ತಿದ್ದೀರಿ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು. ನೀವು ಭ್ರಷ್ಟಾಚಾರದ ಫಲಾನುಭವಿಯೂ ಹೌದು. ಪೋಷಕರು ಹೌದು. ರೀಡೂ ಪಿತಾಮಹ ಯಾರು? ರೀಡೂ ಹೆಸರಿನಲ್ಲಿ 884 ಎಕರೆ ಡಿ-ನೋಟಿಪೈಕೇಷನ್ ಮಾಡಲಾಯಿತು. ಅದು ಅಕ್ರಮವಲ್ಲವೇ ? ಕೆಂಪಣ್ಣ ಆಯೋಗದ ವರದಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಹಗರಣ ಆಗಿರುವುದು ತಪ್ಪು ಎಂಬುದು ಸಾಭೀತಾಗಿದೆ. ಅದನ್ನು ಒಪ್ಪಿಕೊಳ್ಳದೆ ನಾನು ಕ್ಲೀನ್ ಸಿಎಂ ಎಂದರೆ ಹೇಗೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು. ಮೈಸೂರು ಮುಡಾ ವಿಚಾರದಲ್ಲಿ ನೀವು ಅಮಾಯಕ ಅಲ್ಲ. ಕೆಸರೆ ಸರ್ವೇ ನಂಬರ್ 464ರ ಜಾಗಕ್ಕೆ ರಾಜ್ಯಸರ್ಕಾರ 1997ರಲ್ಲಿ ಅಧಿಸೂಚನೆ ಹೊರಡಿಸಿತ್ತು. 1998ರಲ್ಲಿ ಡಿನೋಟಿಫಿಕೇಷನ್ ಹೇಗಾಯ್ತು? ಒಮ್ಮೆ ನೋಟಿಫಿಕೇಷನ್ ಆಗಿರುವ ಜಾಗವನ್ನು ಮತ್ತೆ ಡಿನೋಟಿಫೈ ಮಾಡಲಾಗುವುದಿಲ್ಲ ಎಂದರು.

   

Related Articles

error: Content is protected !!