ಕುಂದಾಪುರ : ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಇವರ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ 10ನೇ ವರ್ಷದ ಪಾರಂಪರಿಕ ಆಹಾರ ಪದ್ಧತಿಯ ಕುರಿತು ಅರಿವು ಮೂಡಿಸುವ ‘ಸಸ್ಯಾಮೃತ‘ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು
ಮುಖ್ಯ ಅತಿಥಿಯಾಗಿ ಆಗಮಿಸಿದ ಹೂಡೆಯ ಬೀಚ್ ಹೀಲಿಂಗ್ ಹೋಮ್ನ ನಿರ್ದೇಶಕ ಡಾ. ಮೊಹಮ್ಮದ್ ರಫೀಕ್ ಮಾತನಾಡಿ ಆಯುರ್ವೇದ, ಯೋಗ, ಪದ್ದತಿಯನ್ನು ಇಡೀ ಜಗತ್ತಿಗೆ ಕೊಡುಗೆಯಾಗಿ ನೀಡಿದ ನಾವೇ ಇಂದು ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ ಇದರಿಂದಲೇ ಮಾನಸಿಕ ಒತ್ತಡ ಹಾಗೂ ಕಾಯಿಲೆಗಳು ಹೆಚ್ಚಾಗುತ್ತಿದೆ
ಇಂದಿನ ಜೀವನ ಪದ್ದತಿ ಹಾಗೂ ಆಹಾರ ಕ್ರಮದಿಂದ ಹದಿ ಹರಯದವರಲ್ಲಿ ಹೃದಯಾಘಾತ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ ಇಂತಹ ಕಾಲಘಟ್ಟದಲ್ಲಿ ಪಾರಂಪರಿಕ ಆಹಾರ ಪದ್ದತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾಂಡ್ಯ ಎಜುಕೇಶನಲ್ ಟ್ರಸ್ಟನವರು ಆಯೋಜಿಸಿದ ಸಸ್ಯಾಮೃತ ಕಾರ್ಯಕ್ರಮವು ನಿಜಕ್ಕೂ ಶ್ಲಾಘನೀಯ ಎಂದು ನುಡಿದರು
ಸಸ್ಯಾಮೃತ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ವಹಿಸಿದ್ದರು ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಸಿಬಂದಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕಿ ಅನುಪಮಾ ಎಸ್. ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು.ಕನ್ನಡ ಶಿಕ್ಷಕಿ ವಿಶಾಲ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಶಾಂತ ಅತಿಥಿಗಳನ್ನು ಪರಿಚಯಿಸಿದರು.
29 ಬಗೆಯ ಪದಾರ್ಥಗಳು
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವಂತಹ ಔಷಧೀಯ ಗುಣವುಳ್ಳ ಸಸ್ಯ ಪದಾರ್ಥಗಳಿಂದಲೇ ತಯಾರಿಸಿದ 29 ಬಗೆಯ ಖಾದ್ಯಗಳನ್ನು ಬಸ್ರೂರಿನ ಬಾಣಸಿಗ ಮಹಾಬಲ ಹರಿಕಾರ್ ನೇತೃತ್ವದ ತಂಡ ತಯಾರಿಸಿ, ಬಂದವರಿಗೆ ಉಣಬಡಿಸಿದರು. ಮುರಿಯ ಕಷಾಯ, ಜಾಯಿಕಾಯಿ ಉಪ್ಪಿನಕಾಯಿ, ಕೆಸುವಿನ ಸೊಪ್ಪಿನ ಚಟ್ಟಿ ಸಂದು ಬಳ್ಳಿ ಚಟ್ಟಿ ಮಾತಂಗಿ ಸೊಪ್ಪಿನ ಚಟ್ನ ಬಾಳೆದಿಂಡಿನ ಪಚ್ಚಡಿ, ಕಣಿಲೆ ಪಲ್ಯ, ಗಜಗಂಡ ಪಲ್ಯ,