ಕೋಟೇಶ್ವರ : ವಿಶ್ವಮಾನ್ಯತೆ ಹೊಂದಿರುವ ಕುಂದಾಪ್ರ ಕನ್ನಡ ದಿನವನ್ನು ವಕ್ವಾಡಿ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಅರ್ಥಬದ್ಧವಾಗಿ ಆಚರಿಸಿದರು. ಜೊತೆಗೆ ಕುಂದಾಪುರ ಭಾಷೆಯಾಧಾರಿತ ವಿವಿಧ ಹಾಡು , ಕಿರುನಾಟಕ ಮತ್ತು ನೃತ್ಯ ಕುಂದಾಪ್ರದ ರೀತಿ ರಿವಾಜುಗಳು,ಆಷಾಡ ಮಾಸದಲ್ಲಿ ತಯಾರಿಸುವ ವಿಶೇಷ ಪದಾರ್ಥಗಳ ಮಹತ್ವವನ್ನು ತಮ್ಮ ಭಾಷೆಯ ಸವಿಯಲ್ಲಿ ವಿದ್ಯಾರ್ಥಿಗಳು ಎಲ್ಲರಿಗೂ ಉಣಬಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ *ಶ್ರೀಮತಿ. ಅನುಪಮಾ ಶೆಟ್ಟಿ* ವಿಭಿನ್ನ ಕನ್ನಡ ಭಾಷೆ ಗಳಿದ್ದರೂ ಕುಂದಾಪ್ರ ಕನ್ನಡ ಭಾಷೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಗ್ಗಳಿಕೆಯನ್ನು ಪಡೆಯುತ್ತಿದೆ ಎನ್ನುವುದನ್ನು ವಿವಿಧ ಕುಂದಾಪ್ರ ಜನಪದ ಹಾಡು, ಕಥೆಯ ಮೂಲಕ ಮಕ್ಕಳಿಗೆ ಅದರ ಒಳಾರ್ಥದ ಅರಿವು ಮೂಡಿಸುವಂತೆ ತಿಳಿಸಿದರು.ಕುಂದಾಪ್ರ ಭಾಷೆ ನಮ್ಮ ಹೆಮ್ಮೆ ಇದನ್ನು ಎಲ್ಲರೂ ಜೊತೆ ಸೇರಿ ಉಳಿಸಿ ಬೆಳೆಸುವ ಎಂದು ತಿಳಿಸುತ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ . ಸುನಿಲ್ ಪ್ಯಾಟ್ರಿಕ್,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕು.ಸನ್ನಿಧಿ ಮತ್ತು ಶ್ರೇಯಾ ನಿರೂಪಿಸಿ, ಕು .ಅವನಿ .ಪಿ ಸ್ವಾಗತಿಸಿ,ಕು.ಅವನಿ . ಎಸ್ ವಂದಿಸಿದರು. ಕುಂದಾಪ್ರ ಭಾಷೆಯ ಮಹತ್ವವನ್ನು ಕು. ಸೃಷ್ಠಿ ಸಂತೋಷ ತಿಳಿಸಿದರು.