Home » ಕೋಡಿ- ಅಕ್ರಮ ರೇಸಾರ್ಟ,ಹೋಂ ಸ್ಟೇಗಳಿಗೆ ಕಡಿವಾಣ ಹಾಕಿ
 

ಕೋಡಿ- ಅಕ್ರಮ ರೇಸಾರ್ಟ,ಹೋಂ ಸ್ಟೇಗಳಿಗೆ ಕಡಿವಾಣ ಹಾಕಿ

ಕೋಡಿ ಜನತೆಗೆ ಹಕ್ಕುಪತ್ರ ನೀಡಿ ಗ್ರಾಮಸಭೆಯಲ್ಲಿ ಆಗ್ರಹ

by Kundapur Xpress
Spread the love

ಕೋಟ : ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ರೇಸಾರ್ಟ್‌ ಹೋಂ ಸ್ಟೇಗಳು ಸಾಕಷ್ಟು ತಲೆ ಎತ್ತಿವೆ ನಾವು ತಿರುಗಾಡಿಕೊಂಡಿದ್ದ ಸಮುದ್ರ ತಟ ಇಂದು ರೇಸಾರ್ಟ್‌ ಹೋಂ ಸ್ಟೇಗಳ ಬೃಹತ್ ಕಂಪೌಂಡ್ ತಲೆ ಎತ್ತಿವೆ ಹಾಗಾದ್ರೆ ಈ ಪರಿಸರದಲ್ಲಿ ನಮ್ಮೂರ ಹೆಣ್‍ಮಕ್ಳು ತಿರುಗಾಡಬೇಕಂಬ ಸದಾಶಯ ನಿಮಗಿಲ್ವಾ ಎಂದು ಕೋಡಿ ಗ್ರಾಮ ಸಭೆಯಲ್ಲಿ ಕೇಳಿ ಬಂದ ಕೂಗು ಇದಾಗಿದೆ
ಸೋಮವಾರ ಕೋಡಿ ಸರಕಾರಿ ಶಾಲೆಯ ಸಭಾಂಗಣದಲ್ಲಿ ಕೋಡಿ ಗ್ರಾಮ ಪಂಚಾಯತ್  ಪ್ರಥಮ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪರವಾಗಿ ಒರ್ವ. ಕೇಳಿದ ಪ್ರಶ್ನೆಯಾಗಿದೆ ಈ ಬಗ್ಗೆ ಉತ್ತರಿಸಿದ ಪಿಡಿಓ ರವೀಂದ್ರ ರಾವ್ ನಾವು ಕಂಪೌಂಡ್ ನಿರ್ಮಾಣಕ್ಕೆ ಲೈಸೆನ್ಸ್ ನೀಡಿಲ್ಲ ಅಲ್ಲದೆ ಅಕ್ರಮ ವ್ಯವಸ್ಥೆ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೋಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಮಾತನಾಡಿ ಕೋಡಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ ಹಾಗಾದರೆ ಇನ್ನೆಷ್ಟು ದಿನ ಕಾಯಬೇಕು ಈ ಬಗ್ಗೆ ಮಾಹಿತಿ ನೀಡಿ ಎಂದು ಗ್ರಾಮ ಲೆಕ್ಕಿಗರಲ್ಲಿ ಪ್ರಶ್ನಿಸಿದರಲ್ಲದೆ ಸಂಬಂಧಪಟ್ಟ ಇಲಾಖೆಗೆ ಹಾಗೂ ಸರಕಾರ ಗ್ರಾಮಸಭೆಯ ಆಗ್ರಹ ತಿಳಿಸಿ ಎಂದರು
ಈ ಬಗ್ಗೆ ಉತ್ತರಿಸಿದ ಗ್ರಾಮಲೆಕ್ಕಿಗ ಗಿರೀಶ ಸಾಕಷ್ಟು ವರ್ಷಗಳಿಂದ ಇದರ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದೇನೆ ಈಗಾಗಲೇ ಕೆಲವು ಹಕ್ಕು ಪತ್ರ ಹಣ ಕಟ್ಟಿಲ್ಲ ಇದರ ಬಗ್ಗೆ ಮಾಹಿತಿ ನೀಡಿ ಇನ್ನುಳಿದ ಪರಂಭೂಮಿ,ಸಮುದ್ರ ತಟದ ಬಗ್ಗೆ ಸರಕಾರದ ಮಟ್ಟದಲ್ಲಿ ಈ ಕಡತ ಪೂರ್ಣಗೊಳ್ಳಬೇಕಿದೆ ಎಂದರು.
ಪಚ್ಚಿಲೇ ಕೃಷಿ ನೆಪದಲ್ಲಿ ಉಪ್ಪು ನೀರಿನ ಹೊಳೆಯಲ್ಲಿ ಕಂಬಗಳ ಚಪ್ಪರ ಇಡೀ ಹೊಳೆಯನ್ನು ಆವರಿಸಿದೆ ಹಾಗಾದರೆ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರ ಗತಿ ಏನು ಎಂದು ಕೆಲ ಮೀನುಗಾರರು ಪ್ರಶ್ನಿಸಿ ಈ ಸಭೆಗೆ ಇಲಾಖೆಯ ಮೇಲಾಧಿಕಾರಿಗಳು ಆಗಮಿಸಬೇಕಿತ್ತು ಯಾಕೆ ಉಪಸ್ಥಿತರಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಬಗ್ಗೆ ಮಧ್ಯಪ್ರವೇಶಿದ ಕಿನಾರಾ ಮೀನುಗಾರ ಸೊಸೈಟಿ ನಿರ್ದೇಶಕ ಸುದಿನ ಕೋಡಿ ಪಚ್ಚಿಲೇ ಕೃಷಿ ಇತ್ತೀಚಿಗಿನ ಉದ್ಯಮವಾಗಿದೆ ಇದರಲ್ಲಿ ಕೆಲವರು ಸಹಿ ಪಡೆದು ಸರಕಾರದ ಸಬ್ಸಿಡಿ ಪಡೆಯುತ್ತಿದ್ದಾರೆ ಇದರಲ್ಲಿ ಸಾಂಪ್ರದಾಯಿಕ ಮೀನುಗಾರರ ಮನೆಯವರು ಸೇರಿಕೊಂಡಿದ್ದಾರೆ ಅಕ್ರಮ ಕಂಡು ಬಂದರೆ ಅದನ್ನು ತೆರವುಗೊಳಿಸಿ ಎಂದರು ಈ ಬಗ್ಗೆ ಪಿಡಿಓ ಈ ಚರ್ಚೆ ಇಲ್ಲಿ ಬೇಡ ವಾರದೊಳಗೆ ಮೀನುಗಾರಿಕಾ ಇಲಾಖೆಯವರನ್ನು ಕರೆಸಿ ವಿಶೇಷ ಸಭೆ ನಡೆಸಿ ಅದರ ಬಗ್ಗೆ ಚರ್ಚಿಸುವಾ ಎಂದರು.
ಇನ್ನುಳಿದಂತೆ ಕೋಡಿ ಮಹಾಸತೀಶ್ವರಿ ದೇಗುಲದ ಎದರುಗಡೆ ಇರುವ ರಸ್ತೆ ಅಭಿವೃದ್ಧಿ ಶೀಘ್ರಗೊಳ್ಳಲು ಕ್ರಮ ಕೈಗೊಳ್ಳಿ, ಕೋಡಿ ಭಾಗದಲ್ಲಿ ಬೀಟ್ ಪೊಲೀಸ್‌ ಕಣ್ಗಾವಲು ನಿರಂತರಗೊಳಿಸಲು ಹಾಗೂ ಹೊಸಬೇಂಗ್ರೆ ಭಾಗದಲ್ಲಿ ಸುಳಿ ಇಲ್ಲದ ತೆಂಗಿನ ಮರ ಬಿಳುವ ಸ್ಥಿತಿಯಲ್ಲಿದೆ ಅದನ್ನು ತೆರವುಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ ವಹಿಸಿದ್ದರು. ಪಂಚಾಯತ್ ಸದಸ್ಯರು,ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕ್ ಗಾವಂಕಾರ್ ಭಾಗವಹಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಗ್ರಾಮಸಭೆ ನಿರ್ವಹಿಸಿದರು.ಕಾರ್ಯದರ್ಶಿ ಉಷಾ ಶೆಟ್ಟಿ ವರದಿ ಮಂಡಿಸಿದರು.

   

Related Articles

error: Content is protected !!