Home » ಜಿಲ್ಲಾ ಅಪರಾಧ ಸುದ್ದಿಗಳು
 

ಜಿಲ್ಲಾ ಅಪರಾಧ ಸುದ್ದಿಗಳು

by Kundapur Xpress
Spread the love

ಗಾಂಜಾ ಸೇವನೆ : ಮೂವರ ಬಂಧನ

ಉಡುಪಿ : ಮಣಿಪಾಲ ಪರಿಸರದಲ್ಲಿ ಗಾಂಜಾ ಅಮಲು ಪದಾರ್ಥ ಸೇವನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಎನ್ ಡಿಪಿಎಸ್ ಆಕ್ಟ್‌ ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ್ದ ಮೊಹಮ್ಮದ್ ಫಯಾಜ್ (30), ಪ್ರಜ್ವಲ್ (34), ನಿಸಾರ್ ಅನ್ಸಾ‌ರ್ (25) ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದು ಆರೋಪಿಗಳು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. 

ಕಾಪು ಗಾಂಜಾ ಸೇವನೆ :

ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಕಂಡುಬಂದ ಆರೋಪಿ ವಿನೋದ್ ಕುಮಾರ್ ಎಂಬವರನ್ನು ಕಾಪು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಕಾಪು ಪಿಎಸ್‌ಐ ಅಬ್ದುಲ್ ಖಾದ‌ರ್ ಅವರು ರೌಂಡ್‌ನಲ್ಲಿದ್ದಾಗ ಗುರುದೇವ್ ಬಾರ್ ಬಳಿ ಅನುಮಾನಾಸ್ಪದವಾಗಿ ಕಂಡುಬಂದಿದ್ದ ಆರೋಪಿಯನ್ನು ವಶಕ್ಕೆ ಪಡೆದು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿ ವೈದ್ಯರು ಆತ ಗಾಂಜಾ ಸೇವಿಸಿರುವ ಬಗ್ಗೆ ವರದಿ ನೀಡಿದ್ದಾರೆ  ಪ್ರಕರಣ ದಾಖಲಾಗಿದೆ

ಮಣಿಪಾಲ : ಗಾಂಜಾ ಅಮಲು ಪದಾರ್ಥ ಸೇವನೆಗೆ ಪ್ರಕರಣಕ್ಕೆಸಂಬಂಧಿಸಿ ಆರೋಪಿ ನಿಹಾದ್‌ (27) ಎಂಬಾತನನ್ನು ಮಣಿಪಾಲ ಠಾಣೆ ಪೊಲೀಸರು ವಶಕ್ಕೆ ಪಡೆದು ಎನ್‌ಡಿಪಿಎಸ್ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆಯ ಬಗ್ಗೆ ಖಚಿತ ಪಡಿಸಿಕೊಳ್ಳಲಾಗಿದೆ.

ಅಂಗಡಿ ಕಳವು ಪ್ರಕರಣ

ಉಡುಪಿ: ಅಂಬಲಪಾಡಿ ಬೈಪಾಸ್ ಸಮೀಪದಲ್ಲಿರುವ ಹಾಲು ಮಾರಾಟ ಮಾಡುವ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳ 35 ಸಾವಿರ ರೂ. ಕಳವು ಮಾಡಿ ಪರಾರಿಯಾಗಿದ್ದಾನೆ.ಅಂಗಡಿಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳ ನಡೆಸಿದ ಕೃತ್ಯದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

ನೇಣು ಬಿಗಿದು ಆತ್ಮಹತ್ಯೆಉಡುಪಿ: ಹಿರಿಯಡ್ಕ ಠಾಣೆ ವ್ಯಾಪ್ತಿಯ ಸುಧಾಕರ (37) ಎಂಬವರು ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿ ಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರೈಲು ಪ್ರಯಾಣಿಕ ಸಾವು

ಕುಂದಾಪುರ : ರೈಲಿನಲ್ಲಿ ಪಯಣಿಸುತ್ತಿದ್ದವ್ಯಕ್ತಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಉತ್ತರ ಪ್ರದೇಶದ ಸರ್ದಾರ್ ಜಿಲ್ಲೆಯ ನಿವಾಸಿ ಶಿವಮ್ ಸಿಂಗ್ (33) ಮೃತಪಟ್ಟವರು.ದಿಲ್ಲಿಯ ಖಾಸಗಿ ಕಂಪನಿ ಯೊಂದರಲ್ಲಿ ಕೆಲಸ ಮಾಡಿಕೊಂಡಿರುವ ಇವರು ಕುಂದಾಪುರಕ್ಕೆ ಅಗತ್ಯ ಕೆಲಸದ ನಿಮಿತ್ತ ಸ್ನೇಹಿತರಾದ ಅರ್ಜಿತ್ ಸಕ್ಷೇನಾ, ಸಂದೀಪ್ ಅವರೊಂದಿಗೆ ಬಂದಿದ್ದರು. ಕೆಲಸದ ನಂತರ ರೈಲಿನಲ್ಲಿ ಊರಿಗೆ ಪಯಣ ಬೆಳೆಸುತ್ತಿರುವ ಹೊತ್ತಲ್ಲಿ ಹಕ್ಲಾಡಿ ಗ್ರಾಮದಲ್ಲಿ ಹಾದುಹೋಗುವ ವೇಳೆ ರೈಲು ಬೋಗಿಯ ಡೋರ್‌ನಲ್ಲಿ ಗಾಳಿ ಸೇವಿಸಲು ನಿಂತ ವೇಳೆ ತಲೆ ಸುತ್ತು ಬಂದಂತಾಗಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು.ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. 

   

Related Articles

error: Content is protected !!