Home » ಪಂಚ ಗ್ಯಾರಂಟಿಗಳು ಯಥಾವತ್‌ ಮುಂದುವರಿಕೆ
 

ಪಂಚ ಗ್ಯಾರಂಟಿಗಳು ಯಥಾವತ್‌ ಮುಂದುವರಿಕೆ

ಸಿ ಎಂ ಸಿದ್ದರಾಮಯ್ಯ

by Kundapur Xpress
Spread the love

ಬೆಂಗಳೂರು : ಆರ್ಥಿಕ ಅಸಮಾನತೆಯಿಂದ ಬಸವಳಿದ ಜನರ ಬದುಕಿಗೆ ನೆಮ್ಮದಿ ತಂದಿರುವ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಯಥಾವತ್ ಮುಂದುವರೆಯಲಿವೆ ಎಂದು ಸಿ ಎಂ ಸಿದ್ದರಾಮಯ್ಯ ತಿಳಿಸಿದರು

ಮಾಣೆಕ್ ಷಾ ಮೈದಾನದಲ್ಲಿ ಗುರುವಾರ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಘೋಷಿಸುವ ಮೂಲಕ ಗ್ಯಾರಂಟಿ ಪರಿಷ್ಕರಣೆ ಕುರಿತು ಕಳೆದ ಎರಡು ದಿನಗಳಿಂದ ನಡೆದಿರುವ ಚರ್ಚೆಗೆ ತೆರೆ ಎಳೆಯುವ ಪ್ರಯತ್ನಮಾಡಿದರು

ಚುನಾವಣೆ ವೇಳೆ ನೀಡಿದ ಭರವಸೆಯಂತೆ ರಾಜ್ಯದ ಜನರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಕೆಲಸವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಮ್ಮ ಸರ್ಕಾರ ಮಾಡಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದ ಬಸವಳಿದ ಜನರಿಗೆ ಗ್ಯಾರಂಟಿ ಯೋಜನೆಗಳು ನೆಮ್ಮದಿ ತಂದಿವೆ. ಹೀಗಾಗಿ ಈ ಯೋಜನೆಯನ್ನು ಪರಿಷ್ಕರಿಸುವ, ಬದಲಾಯಿಸುವ ಅಥವಾ ನಿಲ್ಲಿಸುವ ಯಾವ ಚಿಂತನೆಯೂ ಸರ್ಕಾರಕ್ಕೆ ಇಲ್ಲ. ಯೋಜನೆಗಳು ಯಥಾವತ್ ಮುಂದುವರೆಯಲಿವೆ ಎಂದು ಘೋಷಿಸಿದರು

   

Related Articles

error: Content is protected !!