ಕಾರವಾರ : ಆಗಸ್ಟ 7ರಂದು ಕಾಳಿ ನದಿ ಸೇತುವೆ ಕುಸಿದು ನದಿಗೆ ಬಿದ್ದಿದ್ದ ತಮಿಳುನಾಡು ಮೂಲದ ಲಾರಿಯನ್ನು 1 ವಾರದ ಬಳಿಕ ಈಶ್ವರ ಮಲ್ಪೆ ತಂಡದ ಸಹಾಯದಿಂದ ಐಆರ್‌ಬಿ ಕಂಪನಿ ನೇತೃತ್ವದಲ್ಲಿ ಮೂರು ಕ್ರೇನ್, ಟೋಯಿಂಗ್ ಮಷಿನ್, ರೋಪ್ ಬಳಸಿ ಲಾರಿಯನ್ನು ಯಶಸ್ವಿಯಾಗಿ ದಡಕ್ಕೆ ತರಲಾಯಿತು.
ಆ.7ರಂದು ಮಧ್ಯರಾತ್ರಿ ಕಾಳಿ ನದಿ ಸೇತುವೆ ಕುಸಿದು ಲಾರಿ ನೀರಿನಲ್ಲಿ ಮುಳುಗಿತ್ತು. ಲಾರಿ ಚಾಲಕ ತಮಿಳುನಾಡಿನ ಬಾಲ ಮುರುಗನ್ ಎಂಬಾತನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ಲಾರಿ ಮೇಲೇತ್ತುವ ಕಾರ್ಯಾಚರಣೆಯನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಹಾಗೂ ಅವರ ತಂಡದವರು ನೀರಿನಲ್ಲಿ ಮುಳುಗಿ ರೋಪ್ ಆಳವಡಿಸಿದ ತರುವಾಯ ಲಾರಿಯನ್ನು ಮೇಲಕ್ಕೆತ್ತಲಾಯಿತು. ಸತತ 7 ಗಂಟೆ ನಡೆದ ಈ ಕಾರ್ಯಾಚರಣೆಯನ್ನು ನೂರಾರು ಜನರು ವೀಕ್ಷಿಸಿದರು.