ಕುಂದಾಪುರ : ನಗರದ ಒಂಭತ್ತು ದಂಡಿಗೆ ಪಡುಕೇರಿಯ ಯುವ ಮಿತ್ರ ವೃಂದ ದವರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು
ಯುವ ಮಿತ್ರ ವೃಂದದ ಅಧ್ಯಕ್ಷರಾದ ಶ್ರೀ ಅಮರ್ ಕುಮಾರ್, ಕಾರ್ಯದರ್ಶಿ ಮಹೇಶ್, ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ ಕೇಶವ, ಚಿಕ್ಕಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ನಾಗರಾಜ ಕಾಮಧೇನು ಮತ್ತು ಸಂಘದ ಇನ್ನಿತರ ಸದಸ್ಯರು ಮತ್ತು ಪಡುಕೇರಿಯ ಗ್ರಾಮಸ್ತರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಆಮಂತ್ರಿತರಾದ ಪಡುಕೇರಿ ಗ್ರಾಮದ ಭೂಸೇನಾ ಅಧಿಕಾರಿ ಶ್ರೀ ಮಂಜುನಾಥ ಶೇರಿಗಾರ್ ಅವರು ದ್ವಜಾರೋಹಣವನ್ನು ನೆರವೇರಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಮತ್ತು ಮಹಾನ್ ದೇಶಭಕ್ತರನ್ನು ಈ ವೇಳೆಯಲ್ಲಿ ಸ್ಮರಿಸಲಾಯಿತು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮತ್ತು ಸಿಹಿ ತಿಂಡಿ ವಿತರಿಸುವುದರೊಂದಿಗೆ ಮುಕ್ತಾಯವಾಯಿತು.