ನವದೆಹಲಿ : ಸಂವಿಧಾನದ 370ನೇ ವಿಧಿ ರದ್ದಾದ 5 ವರ್ಷ ಬಳಿಕ ಹಾಗೂ ಒಟ್ಟಾರೆ 10 ವರ್ಷಗಳ ನಂತರ ಜಮ್ಮು- ಕಾಶ್ಮೀರ ವಿಧಾನಸಭೆಗೆ ಸೆ.18 ರಿಂದ 3 ಹಂತದಲ್ಲಿ ಚುನಾ ವಣೆ ನಡೆಯಲಿದೆ. ಹರ್ಯಾಣದಲ್ಲಿ ಅ.1ರಂದು ಒಂದೇ ಹಂತದ ಮತದಾನವಾಗಲಿದೆ. ಅ.4ಕ್ಕೆ ಎರಡೂ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣೆ ಆಯೋಗ ತಿಳಿಸಿದೆ. ಹರ್ಯಾಣದ ಜತೆಗೆ ನಡೆಯುತ್ತಿದ್ದ ಮಹಾರಾಷ್ಟ್ರ ಚುನಾವಣೆಯನ್ನು ಕೆಲ ದಿನಗಳ ಬಳಿಕ ಘೋಷಿಸಲು ಆಯೋಗ ನಿರ್ಧರಿಸಿದೆ.