ತೆಕ್ಕಟ್ಟೆ- ಪಂಚವರ್ಣದಂತೆ ಪ್ರತಿ ಭಾಗದಲ್ಲೂ ಹಸಿರು ಕ್ರಾಂತಿ ಪಸರಿಸಲಿ- ಗೋಪಾಲ್ ಪೂಜಾರಿ ತೆಕ್ಕಟ್ಟೆಯಲ್ಲಿ ಹಸಿರು ಜೀವ ಕಾರ್ಯಕ್ರಮಕ್ಕೆ ಚಾಲನೆ ಕೋಟ:ಕಳೆದ ಸಾಕಷ್ಟು ವರ್ಷಗಳಿಂದ ಕೋಟ ಪರಿಸರದಲ್ಲಿ ಪಂಚವರ್ಣ ಸಂಸ್ಥೆಯ ಪರಿಸರಸ್ನೇಹಿ ಅಭಿಯಾನ ಹಸಿರು ಜೀವ ಹಮ್ಮಿಕೊಂಡಿದ್ದು ಇದೀಗ ಜಿಲ್ಲೆ ವ್ಯಾಪಿ ವಿವಿದೆಡೆಯಲ್ಲಿ ಆರಂಭಗೊಳ್ಳುತ್ತಿದೆ ಇತ್ತೀಚಿಗೆ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅಲ್ಲಿನ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಅನುಷ್ಠಾನಗೊಳಿಸಿ ಪ್ರತಿಭಾನುವಾರ ಅಲ್ಲಿ ಈ ಅಭಿಯಾನ ನಡೆಯುತ್ತಿದೆ ಅದರಂತೆ 78ನೇ ಸ್ವಾತಂತ್ರ್ಯೋತ್ಸವ ದಿನದಂದು ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕೋಟದ ಪಂಚವರ್ಣ ಸಂಸ್ಥೆಯ ಮಾರ್ಗದರ್ಶನದಲ್ಲಿ ಗೀತಾನಂದ ಫೌಂಡೇಶನ್ ಕೊಡಮಾಡಿದ ಗಿಡಗಳನ್ನು ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್ಎಲ್ಆರ್ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಇವರ ಮೂಲಕ ಹಸಿರು ಜೀವ ಪ್ರತಿಭಾನುವಾರದ ಪರಿಸರಸ್ನೇಹಿ ಕಾರ್ಯಕ್ರಮಕ್ಕೆ ಸಹಕಾರಿ ಧುರೀಣ ಕೊಮೆ ಗೋಪಾಲ ಪೂಜಾರಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಂಚವರ್ಣದಂತೆ ಇಡೀ ಜಿಲ್ಲಾದ್ಯಂತ ವಿವಿಧ ಸಂಘಸಂಸ್ಥೆಗಳು ಪರಿಸರವನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಆಗ ಮಾತ ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ, ಈ ದಿಸೆಯಲ್ಲಿ ತೆಕ್ಕಟ್ಟೆ ಗ್ರಾ.ಪಂ ರೇವತಿಯರ ಕಾರ್ಯ ನಿಜಕ್ಕೂ ಪ್ರಶಂಸನೀಯ,ಸ್ವಚ್ಛಭಾರತ ಪರಿಕಲ್ಪನೆಯನ್ನು ಪಂಚಾಯತ್ ಮೂಲಕ ಅನುಷ್ಠಾನಗೊಳಿಸುವ ಇವರ ಕಾರ್ಯ ಇನ್ನಷ್ಟು ಪಸರಿಸಿಕೊಳ್ಳಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ವಿವಿಧ ಮನೆಗಳಿಗೆ ತೆರಳಿ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ನೀಡಲಾಯಿತು.ಎಸ್ಎಲ್ಆರ್ಎಂ ಘಟಕದ ಮುಖ್ಯಸ್ಥೆ ರೇವತಿ ಮತ್ತು ಅವರ ತಂಡ ಉಪಸ್ಥಿತರಿದ್ದರು. ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್ಎಲ್ಆರ್ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಇವರ ಮೂಲಕ ಹಸಿರು ಜೀವ ಪ್ರತಿಭಾನುವಾರದ ಪರಿಸರಸ್ನೇಹಿ ಕಾರ್ಯಕ್ರಮಕ್ಕೆ ಸಹಕಾರಿ ಧುರೀಣ ಕೊಮೆ ಗೋಪಾಲ ಪೂಜಾರಿ ಚಾಲನೆ ನೀಡಿದರು.