Home » ‘ಪ್ರೇರಣಾ’ ಪೂರ್ವ ಪರಿಚಯ: “ಟೀಮ್ ಬಿಲ್ಡಿಂಗ್”
 

‘ಪ್ರೇರಣಾ’ ಪೂರ್ವ ಪರಿಚಯ: “ಟೀಮ್ ಬಿಲ್ಡಿಂಗ್”

by Kundapur Xpress
Spread the love

ಕುಂದಾಪುರ : ವಿದ್ಯಾರ್ಥಿಗಳ ಜೀವನದಲ್ಲಿ ತಂಡ ನಿರ್ಮಾಣವು ಅತ್ಯಂತ ಮುಖ್ಯವಾದ ಭಾಗ. ಇದು ನಮಗೆ ಹೆಚ್ಚು ಗುರಿ ಸಾಧಿಸಲು ಪರಸ್ಪರ ಸಹಾಯ ಮಾಡಿಕೊಳ್ಳಲು ಮತ್ತು ಒಟ್ಟಾಗಿ ಯಶಸನ್ನು ಕಾಣಲು ನೆರವಾಗುತ್ತದೆ. ಇದರ ಜೊತೆಯಲ್ಲಿ ತಂಡ ನಿರ್ಮಾಣವು ಪರಸ್ಪರ ಸಹಾಯ ಮನೋಭಾವನೆ ರೂಪಿಸುವುದಲ್ಲದೆ ಇಂತಹ ಸಹಯೋಗವು ಗೆಲುವಿಗೆ ಮತ್ತು ಸಂತ್ರಪ್ತಿಗೆ ದಾರಿ ಮಾಡುತ್ತದೆ ಎಂದು ಉಡುಪಿಯ ಫ್ರೀಲೆನ್ಸ್ ತರಬೇತಿದಾರರಾದ ಶ್ರೀ ಜಯಕಿಶನ್ ಭಟ್ ಹೇಳಿದರು.ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಸಿದಪ್ರೇರಣಾ ಪೂರ್ವ ಪರಿಚಯ ಕಾರ್ಯಕ್ರಮದಲ್ಲಿಟೀಮ್ ಬಿಲ್ಡಿಂಗ್ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ಸಂದರ್ಭ ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪೂಜಾ ಕುಂದರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಶ್ರೀ ಅಕ್ಷಯ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು.

   

Related Articles

error: Content is protected !!