ಕುಂದಾಪುರ : ಆದಿತ್ಯವಾರ ಬೆಳಿಗ್ಗೆಯಿಂದ ಕುಂದಾಪುರ ನಗರದ ವಾರ್ಡ್ಗಳಲ್ಲಿ ಸಂಚರಿಸಿದ ಕುಂದಾಪುರದ ಸಹಾಯಕ ಕಮೀಶನರ್ ಮಹೇಶ್ಚಂದ್ರರವರು ಮನೆ ಮನೆಗೆ ಭೇಟಿ ನೀಡಿ ಪಹಣಿ ಮತ್ತು ಆಧಾರ್ ಜೋಡಣೆ ಆದ ಬಗ್ಗೆ ಪರಿಶೀಲನೆ ನಡೆಸಿದರು
ಪಹಣಿ ಪತ್ರ ಮತ್ತು ಆಧಾರ್ ಜೋಡಣೆಯಾಗದ ಜಾಗ ಮತ್ತು ಮನೆಗಳಲ್ಲಿ ತಕ್ಷಣವೇ ಪಹಣಿ ಪತ್ರ ಮತ್ತು ಆಧಾರ್ ಜೋಡಣೆ ಮಾಡುವಲ್ಲಿ ಕ್ರಮ ಕೈಗೊಂಡ ಅವರು ಸ್ಥಳದಲ್ಲೇ ಪಹಣಿ ಯಜಮಾನರ ಫೋಟೋದೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಪಹಣಿ ಪತ್ರ ಮತ್ತು ಆಧಾರ್ ಜೋಡಣೆ ಬಗ್ಗೆ ಜನಜಾಗೃತಿ ಮೂಡಿಸಿದರು
ಸಹಾಯಕ ಕಮೀಶನರ್ ಮಹೇಶ್ಚಂದ್ರ ಅವರೊಂದಿಗೆ ಕಂದಾಯ ಅಧಿಕಾರಿ ದಿನೇಶ್ ಮತ್ತು ಸಹಾಯಕ ಗ್ರಾಮ ಕರಣಿಕರಾದ ನವೀನ್ ಉಪಸ್ಥಿತರಿದ್ದು ಪುರಸಭಾ ಸದಸ್ಯ ಶ್ರೀಧರ್ ಶೇರೆಗಾರ್ ಸಹಕರಿಸಿದರು
ಪಹಣಿ ಪತ್ರ ಮತ್ತು ಆಧಾರ್ ಜೋಡಣೆಗೆ ಈ ತಿಂಗಳ 31ನೇ ತಾರೀಖು ಅಂತಿಮ ಗಡುವು ಎಂದು ಅವರು ತಿಳಿಸಿದ್ದಾರೆ