ಕೋಟ: ಸಹಕಾರ ಸಂಘಗಳ ಸಾಲ ವಸೂಲಿ ಬಗ್ಗೆ ಸಂಬಂಧ ಪಟ್ಟ ಸಾಲಗಾರರ ಸ್ಥಿರಾಸ್ಥಿಯನ್ನು ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 103 ರಲ್ಲಿ ಅವಕಾಶದಂತೆ ಸಹಕಾರ ನ್ಯಾಯಾಲಯದ ಮುಟ್ಟುಗೋಲು ಆದೇಶವನ್ನು ಪಹಣಿ ಪತ್ರದ 11ನೇ ರಿಖಾನೆಯಲ್ಲಿ ದಾಖಲಿಸುವಂತೆ ಉಡುಪಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಇಲ್ಲಿಯ ತನಕ ಸಹಕಾರಿ ಸಂಘಗಳ ನ್ಯಾಯಾಲಯದ ಮುಟ್ಟುಗೋಲು ಆದೇಶವನ್ನು ಉಡುಪಿ ಮತ್ತು ಕುಂದಾಪುರ ತಾಲ್ಲೂಕುಗಳ ಕಂದಾಯ ಇಲಾಖೆಯು ಪಹಣಿ ಪತ್ರದಲ್ಲಿ ದಾಖಲಿಸಲು ನಿರಾಕರಿಸಿತ್ತು. ಈ ಬಗ್ಗೆ ಶ್ರೀ ಗುರುನರಸಿಂಹ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘ ಸಾಲಿಗ್ರಾಮ ಇದರ ಮುಖ್ಯ ಕಾರ್ಯನಿರ್ವಾಹಕರು ಸತತ ಪ್ರಯತ್ನಕ್ಕೆ ಯಶಸ್ಸು ದಕ್ಕಿರುವುದಕ್ಕೆ ಕೃತಜ್ಞತೆ ಸಲ್ಲಿಸಿದೆ.