ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ರೋವರ್ಸ್-ರೇಂಜರ್ಸ್ ಘಟಕದ ವತಿಯಿಂದ ಸದ್ಭಾವನಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ರವರು ವಹಿಸಿ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆಯನ್ನು ಬೋಧಿಸಿ, ಈ ದಿನಾಚರಣೆಯ ಮಹತ್ವದ ಬಗ್ಗೆ ಹಿತನುಡಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಮತ್ತು ಭಾರತದ ಪ್ರಜೆಗಳಾದ ನಾವು ಜಾತಿ, ಧರ್ಮ, ಪ್ರದೇಶ ಅಥವಾ ಭಾಷೆಯ ಭೇದ-ಭಾವವಿಲ್ಲದೇ ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯಚಟುವಟಿಕೆಗಳನ್ನು ಮಾಡಬೇಕೆಂಬುದರ ಬಗ್ಗೆ ವಿವರಿಸಿದರು
ನಮ್ಮಲ್ಲಿರುವ ಎಲ್ಲ ಭೇದ ಭಾವಗಳನ್ನು ಹಿಂಸೆ, ಅಸೂಯೆಗೆ ಅವಕಾಶ ನೀಡದೆ ಎಲ್ಲರೂ ಸದ್ಭಾವನೆ, ಸಮಾಲೋಚನೆ ಹಾಗೂ ಸಮಾನತೆಯಿಂದ ಕೂಡಿ ಬಾಳುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದೆ. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು ಹಾಗೂ ಗಣೇಶ ಪೈ, ನಾಗರಾಜ ವೈದ್ಯ ಎಂ., ಶ್ರೀ ರವಿಚಂದ್ರ ಹೆಚ್.ಎಸ್., ಡಾ. ಭಾಗೀರಥಿ ನಾಯ್ಕ ಉಪಸ್ಥಿತರಿದ್ದರು. ರೇಂಜರ್ ಲೀಡರ್ ಡಾ. ಮುನಿರತ್ನಮ್ಮ ಎಲ್.ಎಂ. ಇವರು ಸ್ವಾಗತವನ್ನು ಕೋರಿದರು ಹಾಗೂ ವಿದ್ಯಾರ್ಥಿ ನಾಯಕರಾದ ರೋವರ್ ಗಣೇಶ, ರೇಂಜರ್ ಪರಿಣಿತ ಉಪಸ್ಥಿತರಿದ್ದರು. ನವ್ಯ ವಂದಿಸಿದರು.