ಕುಂದಾಪುರ: ಸ್ಥಳೀಯ ಸೂರ್ನಳ್ಳಿ ರಸ್ತೆಯ ಪಡುಕೇರಿ ನಿವಾಸಿಯಾದ ಪ್ರಕಾಶ್ ರಾವ್ (70 ವರ್ಷ) ಇಂದು ಮುಂಜಾನೆ 2.30 ರ ವೇಳೆಗೆ ಹೃದಯಾಘಾತದಿಂದ ನಿಧನ ಹೊಂದಿದರು ಪಡುಕೇರಿಯ ಅಪ್ಪುಲಿ ಸುಬ್ಬಣ್ಣ ಕಂಪೌಂಡ್ ನಿವಾಸಿಯಾದ ಇವರಿಗೆ 2.00 ಗಂಟೆಯ ಸುಮಾರಿಗೆ ಎದೆನೋವು ಗ್ಯಾಸ್ಟ್ರಿಕ್ಸ್ ಇರಬಹುದೆಂದು ಮಿತ್ರರೊಬ್ಬರಿಗೆ ಫೋನ್ ಮಾಡಿ ನ್ಯೂ ಮೆಡಿಕಲ್ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಮಣಿಪಾಲದ ಕೆ ಎಂ ಸಿ ಗೆ ಸಾಗಿಸಲಾಗಿದ್ದು ಅಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರೆಂದು ತಿಳಿದು ಬಂದಿದೆ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನುಅಗಲಿದ್ದಾರೆ