Home » ವಾರಾಹಿ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು
 

ವಾರಾಹಿ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು

ಬೈಂದೂರು ಕ್ಷೇತ್ರಕ್ಕೆ ನೀರುಣಿಸಲು ಯೋಜನೆ

by Kundapur Xpress
Spread the love

ಬೈಂದೂರು : ವಾರಾಹಿ ಯೋಜನೆಗೆ ಸಂಬಂಧಿಸಿದಂತೆ ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಆಗಲಿರುವ ಉಪಯೋಗ ಮತ್ತು ಯೋಜನೆ ಬೈಂದೂರಿನ ಗ್ರಾಮಗಳಿಗೆ ಸಮರ್ಪಕವಾಗಿ ಬಾರದೇ ಇರುವ ಬಗ್ಗೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬುಧವಾರ ವಾರಾಹಿ ಕಚೇರಿಯಲ್ಲಿ ನಡೆದ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಭೆಯಲ್ಲಿ ಬೈಂದೂರು ಕ್ಷೇತ್ರದ ಗ್ರಾಮಗಳಿಗೆ ವಾರಾಹಿ ನೀರುಣಿಸಲು ಇರುವ ಯೋಜನೆಗಳ ಬಗ್ಗೆ ಶಾಸಕರು ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದಾಗ, ಈವರೆಗೂ ಯಾವುದೇ ಗ್ರಾಮಕ್ಕೆ ನೀರು ಒದಗಿಸುವ ಸ್ಪಷ್ಟ ಯೋಜನೆ ಇಲ್ಲದೇ ಇರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಬೈಂದೂರಿಗೆ ವಾರಾಹಿ ನೀರು ಒದಗಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುವುದು ಒಂದು ಭಾಗವಾದರೆ, ಹೊಸದಾಗಿ ಯೋಜನೆಯನ್ನು ರೂಪಿಸಿ ಕಾರ್ಯಗತ ಮಾಡುವ ನಿಟ್ಟಿನಲ್ಲಿಯೂ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬ ಸೂಚನೆಯನ್ನು ಅಧಿಕಾರಿಗಳಿಗೆ ಶಾಸಕರು ನೀಡಿದರು.
ಬೈಂದೂರು ಕ್ಷೇತ್ರಕ್ಕೆ ವಾರಾಹಿ ನೀರು ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಅಥವಾ ಸರ್ಕಾರದ ಹಂತಕ್ಕೆ ಈವರೆಗೂ ಯಾರು ಸಮರ್ಪಕವಾಗಿ ಕೊಂಡೊಯ್ಯದೇ ಇರುವುದು ಸಭೆಯಲ್ಲಿ ಬೆಳಕಿಗೆ ಬಂದಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಮೂರು ವರ್ಗದ ಗ್ರಾಮಗಳು
ಈ ಹಿನ್ನೆಲೆಯಲ್ಲಿ ಬೈಂದೂರು ಕ್ಷೇತ್ರಕ್ಕೆ ವಾರಾಹಿ ನೀರು ಒದಗಿಸುವ ನಿಟ್ಟಿನಲ್ಲಿ ಮೂರು ವರ್ಗದ ಗ್ರಾಾಮಗಳ ಪಟ್ಟಿ ಮಾಡಲಾಗಿದೆ. ಅದರಂತೆ ವಾರಾಹಿ ಯೋಜನೆ ವಂಚಿತ ಗ್ರಾಮಗಳು. ಅಂದರೆ, ವಾರಾಹಿ ನೀರು ಬಾರದೇ ಇರುವ ಗ್ರಾಮಗಳು. ಭಾಗಶಃ ವಂಚಿತ ಗ್ರಾಮಗಳು. ಅಂದರೆ ವಾರಾಹಿ ನೀರು ಅಲ್ಪಸ್ವಲ್ಪ ಬರುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ. ಇನ್ನೊಂದು ಸಂತ್ರಸ್ತ ಗ್ರಾಮಗಳು. ಅಂದರೆ, ವಾರಾಹಿ ಯೋಜನೆಯ ಕಾಲುವೆ ಹೋಗಿದೆ. ಆದರೆ ಆ ಗ್ರಾಮಕ್ಕೆ ಅದರಿಂದ ಯಾವುದೇ ಉಪಯೋಗ, ಅನುಕೂಲ ಆಗಿಲ್ಲ. ಹೀಗೆ ಮೂರು ವರ್ಗಗಳಾಗಿ ವಿಂಗಡಿಸಿ, ಈ ಮೂರು ವರ್ಗದ ಗ್ರಾಮಕ್ಕೂ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸಲು ಬೇಕಾದ ಹೋರಾಟ ರೂಪಿಸಲಿದ್ದೇವೆ ಎಂದು ಶಾಸಕರು ತಿಳಿಸಿದರು.

ಸುದೀರ್ಘ ಹೋರಾಟ
ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ವಾರಾಹಿ‌ನೀರು ತರುವ ನಿಟ್ಟಿನಲ್ಲಿ ವಾರಾಹಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಸುದೀರ್ಘ ಹೋರಾಟ ರೂಪಿಸಲಾಗಿದೆ.
ವಾರಾಹಿ ಯೋಜನೆಯಿಂದ ಈವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅನುಕೂಲ ಆಗಿಲ್ಲ. ಯೋಜನೆಯು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಅನ್ವಯಿಸುವಂತೆ ಮತ್ತು ಇಲ್ಲಿನ ರೈತರ ಅನುಕೂಲಕ್ಕಾಗಿ ಸುಧೀರ್ಘ ಹೋರಾಟವನ್ನು ರೂಪಿಸುತ್ತಿದ್ದೇವೆ. ಇದಕ್ಕಾಗಿ ಹೋರಾಟ ಸಮಿತಿ ರಚನೆ ಮಾಡಲಾದೆ. ಈ ಸಮಿತಿ ಈಗಾಗಲೇ ಸಿದ್ದಾಪುರ ಭಾಗದಲ್ಲಿ ಒಂದು ಸಭೆಯನ್ನು ನಡೆಸಿದೆ. ಎಲ್ಲ ಗ್ರಾಮಗಳಲ್ಲೂ ಸಭೆ ನಡೆಸಲಿದೆ. ವಿವಿಧ ಮಾದರಿಯಲ್ಲಿ ಹೋರಾಟ ನಡೆಯಲಿದೆ.
ಸಮಿತಿ ಸಭೆಯ ನಿರ್ಧಾರದಂತೆ ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಲಿದ್ದೇವೆ. ಇಲ್ಲಿನ ರೈತರ ಅನುಕೂಲಕ್ಕಾಗಿ ಸುದೀರ್ಘ ಹೋರಾಟ ನಡೆಯಲಿದೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.

   

Related Articles

error: Content is protected !!