ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯತ್ತಿದೆ ವರ್ಷದಲ್ಲಿ ಆರಾಧನಾ ದಿನದಂದು ರಾಘವೇಂದ್ರ ಸ್ವಾಮಿಗಳು ತಪಸ್ಸಿನಿಂದ ಕಣ್ಣು ತೆರೆದು ಭಕ್ತರನ್ನು ಹರಸುತ್ತಾರೆ ಎಂಬ ನಂಬಿಕೆ ಭಕ್ತರದ್ದು . ಶಂಕು ಕರ್ಣನೆಂಬ ಪುಟ್ಟ ಬಾಲಕ ಬ್ರಹ್ಮ ಶಾಪದಿಂದ ಭೂಮಿಯಲ್ಲಿ ನಾಲ್ಕು ಜನ್ಮವಾಗಿ ಹುಟ್ಟುತ್ತಾನೆ . ಪ್ರಹ್ಲಾದ, ವ್ಯಾಸರಾಯರು , ಬಾಹ್ಲಿಕ ರಾಜ, ರಾಘವೇಂದ್ರ ಸ್ವಾಮಿಗಳು ಈ ನಾಲ್ಕು ಜನ್ಮಗಳಿಂದ ಭೂಮಿಯನ್ನು ಪಾವನಗೊಳಿಸುತ್ತಾರೆ . ರಾಘವೇಂದ್ರ ಸ್ವಾಮಿಗಳ ಆರಾಧ್ಯ ದೈವ ಮೂಲ ರಾಮ . ಕನಸಲ್ಲಿ ಸರಸ್ವತಿಯೇ ಬಂದು ಸನ್ಯಾಸತ್ವ ತೆಗೆದುಕೊಳ್ಳಲು ಹೇಳಿದಂತಹ ಮಹಾನ್ ತಪಸ್ವಿ ಶ್ರೀ ರಾಘವೇಂದ್ರ ಸ್ವಾಮಿಗಳು . ಕಲಿಯುಗದ ಕಲ್ಪತರು ಮತ್ತು ಕಾಮಧೇನು ಎಂದು ರಾಘವೇಂದ್ರ ಸ್ವಾಮಿಗಳನ್ನು ಕರೆಯುತ್ತಾರೆ . ರಾಘವೇಂದ್ರ ಸ್ವಾಮಿಗಳು ಮಾಡಿದ ಪವಾಡಗಳು ಅಷ್ಟಿಷ್ಟಲ್ಲ ಕುರಿ ಕಾಯುವ ವೆಂಕಣ್ಣ ದಿವಾನನಾದ ಸಿದ್ಧಿ ಮಸೂದ್ ಖಾನ್ ಅರ್ಪಿಸಿದ ಮಾಂಸ ಫಲ ಮತ್ತು ಪುಷ್ಪಗಳಾದವು , ರಾಯರು ಕೊಟ್ಟ ಮೃತ್ತಿಕಾ ಪ್ರಸಾದ ಮದುವೆ ಮಾಡಿಸಿದ್ದು , ನವಾಬನ ಮಗನಿಗೆ ಪ್ರಾಣದಾನ ಮಾಡಿದ್ದು , ಮೂಕನಿಗೆ ಮಾತು ಬರಿಸಿದ್ದು , ಒನಕೆಗೆ ಜೀವ ಬರಿಸಿದ್ದು , ಕನಕದಾಸರಿಗೆ ಮುಕ್ತಿ ಕೊಡಿಸಿದ್ದು , ಇತ್ತೀಚಿಗಷ್ಟೇ ಆದ ಪವಾಡ ನಡೆಯಲು ಆಗದ ಹುಡುಗಿ ಎದ್ದು ನಡೆದಾಡಿದ್ದು ಹೀಗೆ ರಾಯರು ಮಾಡದ ಪವಾಡಗಳಿಲ್ಲ . ಶ್ರೀ ರಾಮ ಏಳು ತಾಸು ವಿಶ್ರಾಂತಿ ತೆಗೆದುಕೊಂಡಂತಹ ಆ ಶಿಲೆಯನ್ನೇ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಉಪಯೋಗಿಸಲಾಗಿದೆ .
ರಾಯರು ಏಳು ನೂರು ವರ್ಷಗಳ ಕಾಲ ಬೃಂದಾವನದಲ್ಲಿ ಲೋಕಕಲ್ಯಾಣಕ್ಕಾಗಿ ತಪಸ್ಸು ಮಾಡುತ್ತಿರುತ್ತಾರೆ ಎಂದು ಅವರೇ ಹೇಳಿದ್ದಾರೆ. ರಾಯರ ಬೃಂದಾವನದಲ್ಲಿ 700ಕ್ಕೂ ಹೆಚ್ಚು ವಿಷ್ಣು ಸಾಲಿಗ್ರಾಮಗಳಿವೆ. ರಾಯರು ಒಂದು ಸಲ ನಾಮ ಉಚ್ಚರಿಸಿದರೆ ಸಾಕು ಮಹಾ ವಿಷ್ಣು ಸದಾ ಅವರ ಜೊತೆಗಿರುತ್ತಿದ್ದರು . ರಾಯರ ಬೃಂದಾವನದ ವಿಶೇಷಗಳು ಅನೇಕ
ರಾಮ ನಡೆದಾಡಿದ ಜಾಗ , ಕೃಷ್ಣಾರ್ಜುನರು ಸೇರಿ ಯುದ್ಧ ಮಾಡಿದ ಜಾಗ , ಪ್ರಹ್ಲಾದ ರಾಜನು ಯಾಗ ಮಾಡಿದಂತಹ ಜಾಗ
ಎಲ್ಲವೂ ದೈವ ಲಿಖಿತ ಪರಮಾದ್ಭುತ . ಮಂಚಾಲಮ್ಮ ಪ್ರಹಲ್ಲಾದ ರಾಜನ ಆರಾಧ್ಯ ದೇವಿ. ಮಂಚಾಲಮ್ಮ ದೇವಿಯ ಹೆಸರಿನಿಂದಲೇ ಮಂತ್ರಾಲಯವೆಂಬ ಪುಣ್ಯಭೂಮಿಯ ಹೆಸರು ಬಂದಿದ್ದು ಆಕೆಯ ಆಶೀರ್ವಾದದಿಂದಲೇ ರಾಯರು
ರಾಯರು ಬೃಂದಾವನ ಪ್ರವೇಶಿಸಿದ್ದು. ರಾಯರ ಪ್ರತಿಯೊಂದು ಬೃಂದಾವನದಲ್ಲಿ ಮಂತ್ರಾಲಯದಷ್ಟೇ ಅದ್ಭುತ ಶಕ್ತಿ ಇದೆ.
ರಾಯರನ್ನು ಆರಾಧಿಸಿದರೆ ಕೊಡದ ವರಗಳಿಲ್ಲ . ಹಸನ್ಮುಖಿ ಸದಾ ಭಕ್ತರನ್ನು ಹರಸುವ ಕಲಿಯುಗದ ಕಾಮಧೇನು .
ರಾಯರ 353 ನೆಯ ಆರಾಧನಾ ಮಹೋತ್ಸವ ಆಗಸ್ಟ್ 20 ರಿಂದ 23ರ ವರೆಗೆ ಮಂತ್ರಾಲಯದಲ್ಲಿ ನಡೆಯಲಿದೆ .
ರಾಯರಿಗೆ ಪ್ರಿಯವಾದಂತಹ ಗಾಯತ್ರಿ ಮಂತ್ರ
ಓಂ ವೆಂಕಟನಾಥಾಯ ವಿದ್ಮಹೇ ಸಚಿದಾನಂಧಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ವೆಂಕಟನಾಥಾಯ ವಿದ್ಮಹೇ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ಪ್ರಹಲಾದಾಯ ವಿದ್ಮಹೇ ವ್ಯಾಸ ರಾಜಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್
ಪ್ರದೀಪ್ ಕುಮಾರ್ ಚಿನ್ಮಯಿ ಆಸ್ಪತ್ರೆ ,ಕುಂದಾಪುರ