ಚಿಕ್ಕಮಗಳೂರು : ಕಾಂಗ್ರೆಸ್ ಸರ್ಕಾರ ಎಲ್ಲದರ ಮೇಲೂ ದರ ಏರಿಸಿದ್ದು, ಇನ್ನು ಗಾಳಿಯ ಮೇಲೂ ಒಂದು ತೆರಿಗೆ ಹಾಕಿಬಿಟ್ಟರೆ ಔರಂಗಜೇಬನ ಅಪ್ಪಂದಿರು ಎನ್ನುವುದನ್ನು ತೋರಿಸಿದಂತೆ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದರು. ನಗರದಲ್ಲಿ ಬೆಂಗಳೂರು ಜಲ ಮಂಡಳಿ ದರ ಏರಿಕೆ ಮಾಡುವ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮದ್ಯದ ಬೆಲೆ, ಸ್ಟಾಂಪ್ ಡ್ಯೂಟಿ, ವಿದ್ಯುತ್ ಬಿಲ್ ಹೀಗೆ ಎಲ್ಲವನ್ನೂ ಏರಿಸಿದರು. ಈಗ ನೀರಿನ ದರವನ್ನೂ ಹೆಚ್ಚಿಸುತ್ತಿದ್ದಾರೆ. ಗಾಳಿಯ ಮೇಲೆ ಟ್ಯಾಕ್ಸ್ ಹಾಕು ವುದು ಮಾತ್ರ ಉಳಿದಿದೆ. ಒಂದು ಕಡೆ ಗ್ಯಾರಂಟಿ ನೀಡಿ ಮತ್ತೊಂದು ಕಡೆ ಪಿಕ್ ಪ್ಯಾಕೇಟ್ ಮಾಡಲಾಗುತ್ತಿರುವ ಸರ್ಕಾರ 2000 ಕೊಟ್ಟು 20000 ಹೊಡೆಯುತ್ತಿದೆ. ಜನವಿರೋಧಿ ಸರ್ಕಾರಕ್ಕೆ ಆಯಸ್ಸು ಕಡಿಮೆ ಎಂದರು