ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಜಿಲ್ಲಾ ಪಂಚಾಯತ್ ಉಡುಪಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಬೆಳ್ಳಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಇವರ ಸಹಯೋಗದೊಂದಿಗೆ ಉಚಿತ ಮಧುಮೇಹ ಪರೀಕ್ಷೆ ಶಿಬಿರ
ಬೆಳ್ಳಲದ ಸರ್ಕಾರಿ ಚಿಕಿತ್ಸಾಲಯದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಗಾಟನೆಯನ್ನು ಕೆರಾಡಿ ಗ್ರಾಮ ಪಂಚಯತ್ ನ ಅದ್ಯಕ್ಷರಾದ ಶ್ರೀ ಸುದರ್ಶನ ಶೆಟ್ಟಿ ನೆರವೇರಿಸಿ ಮಾತನಾಡಿದರು ಆರೋಗ್ಯಕರ ಜೀವನಕ್ಕಾಗಿ ಇಂತಹ ಶಿಬಿರವನ್ನು ಪ್ರತಿಯೋಬ್ಬರು ಸದುಪಯೋಗ ಪಡಿಕೊಳ್ಳಬೇಕು ಎಂದರು, ತಾಲೂಕಿನ ವಿವಿಧ ಪಂಚಾಯತ್ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಇದೇ ನವೆಂಬರ್ ನಲ್ಲಿ ಕಾರ್ಯರಂಭ ಮಾಡಲಿದ್ದೇವೆ ಎಂದರು.
ಕಾರ್ಯಕ್ರಮ ದ ಅದ್ಯಕ್ಷತೆ ವಹಿಸಿದ ಆರ್ಯುವೇದ ವೈದ್ಯರಾದ ಡಾ.ನಾಗರಾಜ್ ಕೌಲಗಿ ಜನ ಇಂದು ಆರ್ಯುವೇದದ ಜೋತೆಗಿದ್ದಾರೆ ಅದರಿಂದ ಸದುಪಯೋಗ ಪಡೆಯುತ್ತಿದ್ದಾರೆ, ಅಲ್ಲದೆ ದ್ಯಾನ, ಯೋಗ, ಪ್ರಾಣಾಯಾಮ ದ ಜೋತೆಗೆ ಸಾತ್ವಿಕ ಆಹಾರಗಳ ಸೇವನೆ ಅವಶ್ಯಕವಿದೆ ಎಂದರು. ವೇದಿಕೆಯಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ ಶಶಿಕಲಾ, ಸಿಎಚ್ಓ ಗಳಾದ ಶ್ರೀಮತಿ ಮಹಾದೇವಿ ಪೂಜಾರಿ, ಬೆಳ್ಳಾಲ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಅದ್ಯಕ್ಷರಾದ ಶ್ರೀಮತಿ ರಾಜೀವಿ ಶೆಟ್ಟಿ ಉಪಸ್ಥಿತರಿದ್ದರು, ಶ್ರೀಮತಿ ಸುಗುಣಾ ಶ್ರೀಮತಿ ಜ್ಯೋತಿ ಶೆಟ್ಟಿ ಪ್ರಾರ್ಥನೆ ಗೈದರು,
ಕಾರ್ಯಕ್ರಮವನ್ನು ಲಯನ್ಸ್ ಸದಸ್ಯರಾದ ಸಂತೋಷ್ ನಾಯ್ಕ್ ನಿರೂಪಿಸಿ, ಶ್ರೀಮತಿ ಸುಗುಣ ವಂದಿಸಿದರು, 145 ಕ್ಕೂ ಹೆಚ್ಚಿನ ಫಲನುಭವಿಗಳು ಶಿಬಿರ ದ ಸದುಪಯೋಗ ಪಡೆದರು, ಲಯನ್ಸ್ ಜಗದೀಶ್, ಅಶ್ರಪ್, ಲಯನ್ಸ್ ಶಶಿರಾಜ್ ಪೂಜಾರಿ, ಲಯನ್ಸ್ ಸುಧಾಕರ್ ಪೂಜಾರಿ, ಲಯನ್ಸ್ ಸಂತೋಷ್ ನಾಯ್ಕ್, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು,