Home » ಬೈಂದೂರಿನಲ್ಲಿ ಸಮುದ್ರದ ಅಲೆಗಳ ಅಬ್ಬರ
 

ಬೈಂದೂರಿನಲ್ಲಿ ಸಮುದ್ರದ ಅಲೆಗಳ ಅಬ್ಬರ

ಸ್ಥಳೀಯರ ಆತಂಕ

by Kundapur Xpress
Spread the love

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನಲ್ಲಿ  ಗುಜ್ಜಾಡಿ ಗ್ರಾಮದ ಬೆಣ್ಗೇರಿ, ಮಡಿ ಮತ್ತು ಲೈಟ್ ಹೌಸ್ ಪರಿಸರಗಳಲ್ಲಿ ಸಮುದ್ರವು ತೀರಾ ಪ್ರಕ್ಷುಬ್ಧಗೊಂಡಿದ್ದು ಸಮುದ್ರದ ಬಳಿಯಲ್ಲಿ ವಾಸಿಸುವ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ

ನಾವು ಹಲವು ವರ್ಷಗಳಿಂದ ಸಮುದ್ರದ ಬಳಿ ವಾಸಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ನಮ್ಮ ಊರಿನ ಹಲವು ಕಡೆಗಳಲ್ಲಿ ಸಮುದ್ರದ ಅಲೆಗಳು ತಡೆಯುವ ನಿಟ್ಟಿನಲ್ಲಿ ಕಡಲಿಗೆ ತಡೆಗೋಡೆ ನಿರ್ಮಿಸಿದ್ದಾರೆ, ಆದರೆ ನಮ್ಮ ಬಳಿ ಮಾತ್ರ ತಡೆಗೋಡೆ ನಿರ್ಮಿಸದೆ ಬಿಟ್ಟಿರುವುದರಿಂದ ಕಡಲ ಅಲೆಗಳು ನೇರವಾಗಿ ನಮ್ಮ ಮನೆಗೆ ಅಪ್ಪಳಿಸುತ್ತಿದೆ,
ಇತ್ತೀಚಿನ ದಿನಗಳಲ್ಲಿ ನಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದೇವೆ ನಮ್ಮನ್ನು ಕೇಳುವವರೇ? ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು

ಕಡಲು ಪ್ರಕ್ಷುಬ್ಧಗೊಂಡಿದ್ದು ಕಡಲ ಅಲೆಗಳ ಅಬ್ಬರ ಜೋರಾಗಿದೆ ಅಲೆಗಳು ಮನೆಗಳ ಹತ್ತಿರ ಬರುತ್ತಿದ್ದು ಸ್ಥಳೀಯ ನಿವಾಸಿಗಳು ಜೀವಭಯದಲ್ಲಿ ಬದುಕುವಂತಾಗಿದೆ.

ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಸಮುದ್ರದ ಮಟ್ಟ ಏರಿಕೆಗೊಂಡ ಹಿನ್ನಲೆಯಲ್ಲಿ ಅಮಾವಾಸ್ಸೆ, ಹುಣ್ಣಿಮೆ ಸಮಯದಲ್ಲಿ, ಮಳೆಗಾಲ ತೂಫಾನ್ , ಚಂಡ ಮಾರುತ ಸಮಯದಲ್ಲಿ ಸಮುದ್ರದ ನೀರು ಮನೆಯ ಹಿತ್ತಲಿಗೆ ಬಡಿಯುವುದಲ್ಲದೇ ತೆಂಗಿನ ಮರಗಳು ಧರೆಗುರುಳಿರುವುದು ಸಾಮಾನ್ಯವಾಗಿ ಬಿಟ್ಟಿವೆ. ಆದುದರಿಂದ ಇಲ್ಲಿಯ ನಿವಾಸಿಗಳು ಶಾಶ್ವತ ತಡೆಗೋಡೆ ಕೋರಿ ಒತ್ತಾಯಿಸಿರುತ್ತಾರೆ

   

Related Articles

error: Content is protected !!