Home » ಭಗವದ್ಗೀತೆ ಓದಿದವರು ಭಗವಂತನ ಪ್ರೀತಿಗೆ ಪಾತ್ರರಾಗುತ್ತಾರೆ
 

ಭಗವದ್ಗೀತೆ ಓದಿದವರು ಭಗವಂತನ ಪ್ರೀತಿಗೆ ಪಾತ್ರರಾಗುತ್ತಾರೆ

ಪರ್ಯಾಯ ಪುತ್ತಿಗೆ ಶ್ರೀಪಾದರು

by Kundapur Xpress
Spread the love

ಉಡುಪಿ : ಭಗವಂತನಿಗೆ ನಮ್ಮಿಂದ ಏನಾಗಬೇಕಿಲ್ಲ ಭಗವಂತನಿಗೆ ತುಂಬ ಪ್ರಿಯವಾದ ಗೀತೆಯ ಅಧ್ಯಯನ ಹಾಗೂ ಗೀತಾ ಬೋಧೆಯ ಅನುಸರಣೆಯನ್ನು ಮಾತ್ರ ಆತ ನಮ್ಮಿಂದ ಬಯಸುತ್ತಾನೆ. ಗೀತೆ ಓದಿದವರು ಭಗವಂತನ ಪ್ರೀತಿಗೆ ಪಾತ್ರವಾಗುತ್ತಾರೆ ಗೀತೆ ಓದದವ ಭೂಭಾರ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಶ್ರೀಕೃಷ್ಣ ಮಾಸೋತ್ಸವ ಸಂದರ್ಭದ ಶ್ರೀಕೃಷ್ಣ ಸಪ್ಪೋತ್ಸವದಲ್ಲಿ ಶನಿವಾರ ನಡೆದ ಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.

ಮಾನವನ ಉದ್ಧಾರಕ್ಕಾಗಿ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಕೊಂಡಲ್ಲಿ ಜೀವನ ಸಾರ್ಥಕ.ಗೀತೆ ಜೀವನಕ್ಕೆ ಗೈಡ್ ಇದ್ದಂತೆ. ಗೀತೆಯ ಅಧ್ಯಯನ ಸಾರ್ಥಕ ಜೀವನಕ್ಕೆ ಕಾರಣವಾಗುತ್ತದೆ ಎಂದರು.ಸಮಾಜ ವಿಘಟನೆಯಲ್ಲಿ ಕಾರ್ಯ ಸಾಧಿಸುವವರೇ ಹೆಚ್ಚಿರುವ ಈ ಸಂದರ್ಭದಲ್ಲಿ ಪರಸ್ಪರ ಗೌರವಿಸುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮಾಜ ಸನ್ಮಾನ ಕಾರ್ಯಕ್ರಮವನ್ನು ನಮ್ಮ ಪರ್ಯಾಯದಲ್ಲಿ ಹಮ್ಮಿಕೊಂಡಿರುವುದಾಗಿ ಶ್ರೀಪಾದರು ತಿಳಿಸಿದರು.ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರಿಂದ ವಿರಚಿತವಾದ ‘ಗೀತಾಧ್ಯಾಯಭಾವ ಪರಿಚಯ’ ಪುಸ್ತಕ ಅನಾವರಣಗೊಳಿಸಿದ ಭಂಡಾರಕೇರಿ ಶ್ರೀ ವಿದ್ವೇಶತೀರ್ಥರು, ಗೀತೆ ಎಂಬ ಹಾಲಿನೊಂದಿಗೆ ಭಾಗವತ ಎಂಬ ಫಲ ಸೇವನೆಯಿಂದ ಆತ್ಮಪುಷ್ಟಿ ಸಾಧ್ಯ. ನಿಷ್ಕಲ್ಮಷ ಭಕ್ತಿಯಿಂದ ಇಂದ್ರಿಯ ನಿಗ್ರಹದ ಪತ್ರ, ನಿಷ್ಕಾಮ ಕರ್ಮದ ಫಲ, ಭಕ್ತಿ ಜಲದ ಸಮರ್ಪಣೆಯಿಂದ ಭಗವಂತ ತುಷ್ಟನಾಗುತ್ತಾನೆ ಎಂದರು.ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥರು ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇಟ್, ಪಿ.ಆರ್. ವಿಠಲ್ ಮತ್ತು ಬಿ.ಎಸ್. ಸಂದೇಶ ಶೆಟ್ಟಿ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಗೀತಾಪ್ರಚಾರಕರಾದ ಪ್ರಭಾ ಮತ್ತು ವಿಶ್ವನಾಥ ಶೆಣೈ, ನಂದಿನಿ ಶೆಣೈ, ಸಂಜೀವ ಗೋಪಿನಾಥ್ ಹಾಗೂ ಕಲಾವಿದರಾದ ರುದ್ರಪಟ್ಲಂ ಸಹೋದರರು ಮತ್ತು ನೆಟ್ಟೂರು ಸಹೋದರರನ್ನು ಶ್ರೀಗಳು ಸನ್ಮಾನಿಸಿದರು.ವಿದ್ವಾಂಸ ಚಕ್ರವರ್ತಿ ಸೂಲಿಬೆಲೆ ‘ಶ್ರೀಕೃಷ್ಣ ಹಿಂಸೆಯನ್ನು ಬೋಧಿಸಿದನೆ’ ವಿಷಯ ಕುರಿತು ಉಪನ್ಯಾಸ ನೀಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ಸ್ವಾಗತಿಸಿ, ವಂದಿಸಿದರು. ಮಹಿತೋಷ ಆಚಾರ್ಯ ನಿರೂಪಿಸಿದರು.ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ ಉಪಸ್ಥಿತರಿದ್ದರು

   

Related Articles

error: Content is protected !!