Home » ಸಂತ್ರಸ್ಥೆ ರಕ್ತದಲ್ಲಿ ಡ್ರಗ್ಸ್‌ ಅಂಶ ಪತ್ತೆ
 

ಸಂತ್ರಸ್ಥೆ ರಕ್ತದಲ್ಲಿ ಡ್ರಗ್ಸ್‌ ಅಂಶ ಪತ್ತೆ

by Kundapur Xpress
Spread the love

ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಯುವತಿಯ ರಕ್ತದ ಪರೀಕ್ಷೆಯಲ್ಲಿ ಮಾದಕ ದ್ರವ್ಯದ ಅಂಶಗಳು ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಥಮ ಆರೋಪಿ ಅಲ್ತಾಫ್ ಹಾಗೂ ಬಿಯರ್ ಬಾಟಲ್ ತಂದು ಕೊಟ್ಟ ಎರಡನೇ ಆರೋಪಿ ರಿಚರ್ಡೊ ಅವರ ರಕ್ತದ ಪರೀಕ್ಷೆಯನ್ನು ನಡೆಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಮಾದಕ ದ್ರವ್ಯವನ್ನು ಸೇವಿಸಿಲ್ಲ ಎಂಬುದಾಗಿ ವರದಿ ಬಂದಿದೆ.

ಪೋಲಿಸ್ ಕಸ್ಟಡಿಯಲ್ಲಿರುವ ಆರೋಪಿ ಅಲ್ತಾಫ್ ತಿಳಿಸಿದಂತೆ ಕೃತ್ಯಕ್ಕೆ ಬಳಸಿದ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಇದನ್ನೇ ಸಂತ್ರಸ್ತೆ ತೆಗೆದುಕೊಂಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಯುವತಿಯ ರಕ್ತ ಪರೀಕ್ಷೆಯಲ್ಲಿ ಡ್ರಗ್ಸ್ ನ ಅಂಶ ಇರುವುದು ಪತ್ತೆಯಾಗಿದ್ದು, ಆರೋಪಿಗಳಿಬ್ಬರು ಮಾದಕ ದ್ರವ್ಯ ತೆಗೆದುಕೊಂಡಿಲ್ಲ ಎಂದು ವರದಿ ಬಂದಿದೆ ಕಾರಿನಲ್ಲಿ ಪತ್ತೆಯಾದ ಪುಡಿಯನ್ನು ಎಫ್ ಎಸ್ಎಲ್ ಗೆ ಕಳಿಸಿ, ಅದು ಯಾವ ಡ್ರಗ್ಸ್ ಎಂದು ತಿಳಿದುಕೊಳ್ಳುತ್ತೇವೆ. ಇದೇ ಡ್ರಗ್ಸ್ ಅನ್ನು ಹುಡುಗಿ ತೆಗೆದುಕೊಂಡಿದ್ದಾಳೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಪ್ರಕರಣದಲ್ಲಿ ಡ್ರಗ್ಸ್ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಪೂರ್ಣ ತನಿಖೆ ನಡೆಸಿ, ಆದಷ್ಟು ಶೀಘ್ರ ಈ ಕೇಸನ್ನು ಪತ್ತೆ ಮಾಡಲಾಗುವುದು. ನೊಂದ ಯುವತಿಯು ವೈದ್ಯಕೀಯವಾಗಿ ಗುಣಮುಖಳಾದ ನಂತರ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವ ಪ್ರಕ್ರಿಯೆ ನಡೆಸುತ್ತೇವೆ ಎಂದು ಜಿಲ್ಲಾ ಎಸ್‌ಪಿ ಡಾ.ಅರುಣ್ ತಿಳಿಸಿದ್ದಾರೆ.

   

Related Articles

error: Content is protected !!