ಬೆಂಗಳೂರು : ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸೋಮವಾರ ಎರಡು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ.
ಕಾರಾಗೃಹ ಇಲಾಖೆ ಡಿಐಜಿ ಸೋಮಶೇಖರ್ ನೀಡಿದ ದೂರಿನ ಮೇರೆಗೆ ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ಈ ಮೂರು ಪ್ರಕರಣಗಳ ಪೈಕಿ ಒಂದಕ್ಕೆ ಬೇಗೂರು ಠಾಣೆ ಇನ್ಸ್ಪೆಕ್ಟರ್, ಮತ್ತೊಂದಕ್ಕೆ ಹುಳಿ ಮಾವು ಠಾಣೆ ಇನ್ಸ್ಪೆಕ್ಟರ್ ಹಾಗೂ ಮಗದೊಂದು ಪ್ರಕರಣದಕ್ಕೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಯನ್ನು ತನಿಖಾಧಿಕಾರಿಗಳಾಗಿ ನೇಮಿಸಲಾಗಿದೆ. ಸೋಮವಾರ ಪರಪ್ಪನ ಆಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು, ಪ್ರಾಥಮಿಕ ವರದಿ ಆಧರಿಸಿ ಕಾರಾಗೃಹದಲ್ಲಿ ಮೊಬೈಲ್ ಫೋನ್ ಬಳಕೆ, ಸಿಗರೇಟ್ ಇತರೆ ವಸ್ತುಗಳ ಬಳಕೆ ಹಾಗೂ ಈ ವಸ್ತುಗಳನ್ನು ಕಾರಾಗೃಹದೊಳಗೆ ಸಾಗಿಸಿದ ಆರೋಪದಡಿ ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ ಎಂದರು.
ಈ ಪೈಕಿ 2 ಎಫ್ಐಆರ್ಗಳಲ್ಲಿ ದರ್ಶನ್ ಮೊದಲ ಆರೋಪಿಯಾಗಿದ್ದಾರೆ. ಜೈಲಿನಲ್ಲಿ ನಡೆದ ಅಕ್ರಮ ಚಟುವಟಿಕೆಗೆ ಸಂಬಂಧಿಸಿದ 3ನೇ ಪ್ರಕರಣದಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ಆಗಿದ್ದು, ಸಜಾ ಬಂಧಿ ಮುಜೀಬ್ 1ನೇ ಆರೋಪಿ. ಇನ್ನುಳಿದಂತೆ ಕಾರಾಗೃಹ ಸಿಬ್ಬಂದಿ ಕೆ.ಎಸ್.ಸುದರ್ಶನ್, ಪರಮೇಶ್ ನಾಯಕ್, ಕೆ.ಬಿ.ರಾಯಮನೆ ಅವರ ಹೆಸರೂ ಇದೆ ಎಂದು ತಿಳಿಸಿದ್ದಾರೆ