Home » ಇಂದಿನಿಂದ ದುಬಾರಿ ಮದ್ಯಗಳ ದರ ಇಳಿಕೆ
 

ಇಂದಿನಿಂದ ದುಬಾರಿ ಮದ್ಯಗಳ ದರ ಇಳಿಕೆ

by Kundapur Xpress
Spread the love

ಬೆಂಗಳೂರು : ಅಕ್ಕಪಕ್ಕದ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ನಮ್ಮಲ್ಲಿ ದರ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಂತೆ ದುಬಾರಿ ದರದ ಮದ್ಯಗಳ ಬೆಲೆ ಇಂದಿನಿಂದಲೇ ಶೇ.15 ರಿಂದ 20 ರಷ್ಟು ಇಳಿಕೆಯಾಗಲಿದೆ. ಆದರೆ ಅಗ್ಗದ ಮದ್ಯಗಳ ದರ ಏರಿಕೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಲ್ಲಿ ದುಬಾರಿ ಬೆಲೆಯ. ಮದ್ಯಗಳ ಬೆಲೆ ಕಡಿಮೆ ಇದೆ. ಆದರೆ ನಮ್ಮಲ್ಲಿ ಹೆಚ್ಚಾಗಿರುವುದರಿಂದ ಗಡಿ ಭಾಗದ ಜನರು ಬೇರೆ ರಾಜ್ಯಗಳಲ್ಲಿ ಮದ್ಯ ಖರೀದಿಸುತ್ತಿದ್ದಾರೆ ಎಂದು ಸರ್ಕಾರವು, ನೆರೆ ಹೊರೆ ರಾಜ್ಯಗಳ ಬೆಲೆ ನೋಡಿಕೊಂಡು ದರ ಪರಿಷ್ಕರಣೆಗೆ ಮುಂದಾಗಿತ್ತು. ಇದನ್ನು ಸಿದ್ದರಾಮಯ್ಯ ಅವರು ಬಜೆಟ್‌ನಲ್ಲೂ ಘೋಷಿಸಿದ್ದರು. ಎರಡು ತಿಂಗಳ ಹಿಂದೆಯೇ ನೂತನ ‘ದರ’ ಅನ್ವಯವಾಗಬೇಕಿತ್ತಾದರೂ ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ ಇದೀಗ ಇಂದಿನಿಂಲೇ ದುಬಾರಿ ಮದ್ಯದ ದರ ಇಳಿಕೆಯಾಗಲಿದೆ

   

Related Articles

error: Content is protected !!