ಉಡುಪಿ : ಕೃಷ್ಣ ಜನ್ಮಾಷ್ಟಮಿಯಂದು ಬಾಲಕೃಷ್ಣನಿಗೆ ಎಳ್ಳು, ಕಡಲೆ, ಹೆಸರು ಇತ್ಯಾದಿಗಳಿಂದ ತಯಾರಿಸಿದ ಲಡ್ಡುಗಳನ್ನು ಸಮರ್ಪಿಸಲಾಗುತ್ತದೆ. ಈ ಲಡ್ಡುಗಳನ್ನು ಸ್ವತಃ ಪರ್ಯಾಯ ಶ್ರೀಗಳೇ ಕೈಯಾರೆ ತಯಾರಿಸಿ, ಲಡ್ಡು ತಯಾರಿಸುವ ಸಂಪ್ರದಾಯಕ್ಕೆ ಚಾಲನೆ ನೀಡಿದರು. 108 ಬಗೆಯ ಲಡ್ಡುಗಳನ್ನು ತಯಾರಿಸುವ ಲಡ್ಡೋತ್ಸವವೂ ಕೃಷ್ಣಮಠದಲ್ಲಿ ನಡೆದಿದ್ದು, ಕೃಷ್ಣನ ಸಮರ್ಪಣೆಗೆ 1 ಲಕ್ಷ ವಿವಿಧ ಬಗೆಯ ಲಡ್ಡು ಮತ್ತು 1 ಲಕ್ಷ ಚಕ್ಕುಲಿಗಳನ್ನು ತಯಾರಿಸಲಾಗಿದೆ. ಅವುಗಳನ್ನು ಕೃಷ್ಣನಿಗೆ ನೈವೇದ್ಯದ ನಂತರ ಇಂದು ಮಂಗಳವಾರ ಭಕ್ತರಿಗೆ ವಿತರಿಸಲಾಗುತ್ತದೆ