ಕೋಟ : ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಕೋಟದ ಕಾಶೀಮಠದಲ್ಲಿ ಭಜನಾ ಸಪ್ತಾಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.ಮಂಗಳವಾರ ನಡೆದ ವಿಟ್ಲಪಿಂಡಿ ಮಹೋತ್ಸವದ ಅಂಗವಾಗಿ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮುದಾಯ ಬಾಂಧವರು ಬಣ್ಣ ಬಣ್ಣದ ನೀರಿನೊಂದಿಗೆ ಒಕುಳಿಯಾಟ ನಡೆಸಿದರು.ಸಮುದಾಯ ಮಹಿಳೆಯರು ಭಜನೆ ನೃತ್ಯದ ಮೂಲಕ ಶ್ರೀದೇವರ ಆರಾಧನೆ ಮಾಡಿದರು.ಪೂರ್ಣಪ್ರಮಾಣದಲ್ಲಿ ಕೋಟ ಪೇಟೆಯಲ್ಲಿ ಸಮುದಾಯದ ಬಾಂಧವರು ಬಣ್ಣದ ನೀರನ್ನು ಪಾತ್ರೆಯಲ್ಲಿ ತುಂಬಿಸಿ ಭಜನೆ ನಿರತರಿಗೆ ಎರೆಯುವ ದೃಶ್ಯ ಸಾರ್ವಜನಿಕರನ್ನು ವಿಶೇಷವಾಗಿ ಸೆಳೆಯಿತು.ಕೋಟ ಕಾಶಿಮಠದಿಂದ ಆರಂಭಗೊಂಡ ಒಕುಳಿ ಮೆರವಣಿಗೆ ಇಡೀ ಪೇಟೆಯಲ್ಲಿ ಮೇಳೈಸಿಕೊಂಡು ವರುಣ ತೀರ್ಥ ಕೆರೆಯಲ್ಲಿ ಸಂಪನ್ನಗೊಳಿಸಿಕೊಂಡರು.ಶ್ರೀ ಮಠದ ಆಡಳಿತ ಮಂಡಳಿ,ಅರ್ಚಕ ವೃಂದ ಭಕ್ತಾಧಿಗಳು ಇದರಲ್ಲಿ ಭಾಗಿಯಾದರು.ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಕೋಟದ ಕಾಶೀಮಠದಲ್ಲಿ ಭಜನಾ ಸಪ್ತಾಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.